ಖಾರ್ತೂಮ್, ಏ 18 (DaijiworldNews/HR): ಸುಡಾನ್ನಲ್ಲಿ ನಡೆಯುತ್ತಿರುವ ಸೇನೆ ಹಾಗೂ ಅರಸೇನಾ ಪಡೆಗಳ ನಡುವಿನ ಕಾದಾಟ ಸತತ ಮೂರನೇ ದಿನವೂ ತಾರಕಕ್ಕೇರಿದ್ದು, ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.
ಸಂಘರ್ಷದಿಂದಾಗಿ ರಾಜಧಾನಿ ಖಾರ್ಟೂಮ್ ನಲ್ಲಿ 5 ಮಿಲಿಯನ್ ಗಿಂತಲೂ ಅಧಿಕ ಮಂದಿ ಮನೆಯಿಂದ ಹೊರಗೆ ಬರಲಾಗದೆ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಇನ್ನು ಸೂಡಾನ್ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಮಧ್ಯೆ ಕಳೆದ ಶನಿವಾರ ಘರ್ಷಣೆ ಆರಂಭವಾಗಿದ್ದು, ಭಾರತದ ವಿದೇಶಾಂಗ ಸಚಿವಾಲಯ ಅಲ್ಲಿನ ಭಾರತೀಯರ ರಕ್ಷಣೆ ಮತ್ತು ಸಹಾಯಕ್ಕಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಅಲ್ಲದೆ ನಿಯಂತ್ರಣ ಕೊಠಡಿ ಸಂಖ್ಯೆಯ ದೂರವಾಣಿ ಸಂಖ್ಯೆ ಇಮೇಲ್ ವಿಳಾಸಗಳನ್ನು ಸಹ ಜನತೆಗೆ ನೀಡಲಾಗಿದೆ.
ದೂರವಾಣಿ ಸಂಖ್ಯೆಗಳು: 1800 11 8797 (ಟೋಲ್ ಫ್ರೀ) +91-11-23012113; +91-11-23014104; +91-11-23017905; ಮೊಬೈಲ್: +91 99682 91988 ಮತ್ತು ಇಮೇಲ್: situationroom@mea.gov.in