ಸುಡಾನ್, ಏ17 (DaiiworldNews/HR): ಸುಡಾನ್ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ನಡುವೆ ನಡೆದ ಗುಂಡಿನ ಚಕಾಮಕಿಯಿಂದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾವಣಗೆರೆ ಜಿಲ್ಲೆಯ ಎಂಟು ಜನ ಸೇರಿ ಕರ್ನಾಟಕದ 31 ಜನರು ಇವರು ವಾಸವಾಗಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದ್ದು, ನೀರು ಆಹಾರ ವಿಲ್ಲದೆ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಖಾರ್ಟೂಮ್ ನಗರದಲ್ಲಿ ಒಂದೇ ಮನೆಯಲ್ಲಿ ವಾಸ ಇರುವ 31 ಜನ ದಾವಣಗೆರೆ ಶಿವಮೊಗ್ಗ ಹಾಗೂ ಮೈಸೂರಿನ ಕೂಲಿ ಕಾರ್ಮಿಕರಾಗಿದ್ದು, ಕಳೆದ ಐದು ವರ್ಷದಿಂದ ಕೆಲಸ ಹುಡುಕಿಕೊಂಡು ಸುಡಾನ್ ಹೋಗಿದ್ದರು. ಸದ್ಯ ಗುಂಡಿನ ದಾಳಿಯಿಂದಾಗಿ ಕನ್ನಡಿಗರು ಆತಂಕದಲ್ಲಿದ್ದಾರೆ.