ಚಿಕಾಗೋ, ಏ 9 (DaijiworldNews/MS): ಕೊರೊನಾ ಡೆಲ್ಟಾ ವೈರಸ್ ಗರ್ಭಾವಸ್ಥೆಯಲ್ಲಿ ತಾಯಿ ಮೂಲಕ ಶಿಶುವಿನ ಮೆದುಳನ್ನು ಹಾನಿಗೊಳಿಸಿದ ಮೊದಲ ಎರಡು ಪ್ರಕರಣ ದೃಢಪಟ್ಟಿರುವುದನ್ನು ಅಮೆರಿಕದ ಸಂಶೋಧಕರು ಇದೀಗ ಖಚಿತಪಡಿಸಿದ್ದಾರೆ.
ಈ ಕುರಿತು ಮಿಯಾಮಿ ವಿವಿಯ ಸಂಶೋಧಕರ ಸಂಶೋಧನೆಗಳನ್ನು ಪೀಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಲಸಿಕೆಗಳು ಲಭ್ಯವಾಗುವ ಮೊದಲು 2020 ರಲ್ಲಿ ಸಾಂಕ್ರಾಮಿಕ ಡೆಲ್ಟಾ ಅಲೆ ಉತ್ತುಂಗದಲ್ಲಿದ್ದಾಗ ತಾಯಿಯು ತಮ್ಮ ಎರಡನೇ ತ್ರೈಮಾಸಿಕದಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಗರ್ಭಾವಸ್ಥೆಯಲ್ಲೇ ಭ್ರೂಣದ ಮೆದುಳನ್ನು ಕೊರೊನಾ ವೈರಸ್ ಹಾನಿಗೊಳಿಸಿದ್ದು ಆ ಪೈಕಿ ಒಂದು ಶಿಶು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೈಟೊಮೆಗಾಲೊವೈರಸ್, ರುಬೆಲ್ಲಾ, ಎಚ್ಐವಿ ಮತ್ತು ಝಿಕಾ ಸೇರಿದಂತೆ ಹಲವಾರು ವೈರಸ್ ಗಳು ಪ್ಲಾಸೆಂಟಾ ದಾಟಲು ಮತ್ತು ಭ್ರೂಣದ ಮಿದುಳಿನ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿದುಬಂದಿದೆ.