ವಿಂಡ್ಸರ್, ಏ 05 (DaijiworldNews/MS): ಕೆನಡಾದ ಒಂಟಾರಿಯೊದ ವಿಂಡ್ಸರ್ನಲ್ಲಿ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ಮತ್ತೆ ದಾಳಿ ನಡೆಸಿದ್ದಾರೆ. ದೇವಸ್ಥಾನದ ಗೋಡೆಗಳ ಮೇಲೆ ದ್ವೇಷಪೂರಿತ ಘೋಷಣೆಗಳನ್ನು ಬರೆಯಲಾಗಿದೆ. ಸ್ವಾಮಿನಾರಾಯಣ ಮಂದಿರದ ಹೊರಗಿನ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಹಿಂದೂ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.
ವಿಂಡ್ಸರ್ ಪೊಲೀಸರ ಪ್ರಕಾರ, ಈ ವಿಧ್ವಂಸಕ ಕೃತ್ಯವನ್ನು "ದ್ವೇಷ-ಪ್ರೇರಿತ ಘಟನೆ" ಎಂದು ಕರೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಇಬ್ಬರು ಶಂಕಿತರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಅಧಿಕಾರಿಗಳು ಮಧ್ಯರಾತ್ರಿ 12 ಗಂಟೆಯ ನಂತರ ಪ್ರದೇಶದಲ್ಲಿ ಇಬ್ಬರು ಶಂಕಿತರು ಕಾಣಿಸಿಕೊಂಡ ವೀಡಿಯೊವನ್ನು ಪಡೆದುಕೊಂಡಿದ್ದಾರೆ. ವೀಡಿಯೊದಲ್ಲಿ, ಒಬ್ಬ ಶಂಕಿತನು ಕಟ್ಟಡದ ಗೋಡೆಯನ್ನು ಧ್ವಂಸ ಮಾಡಿದ್ದು, ವ್ಯಕ್ತಿಯೊಬ್ಬ ಅವನ ಪಕ್ಕ ನಿಂತಿರುವುದನ್ನು ಕಾಣಬಹುದು.
"ಏಪ್ರಿಲ್ 5ರಂದು, ದ್ವೇಷ-ಪ್ರೇರಿತ ವಿಧ್ವಂಸಕತೆಯ ವರದಿಯ ನಂತರ ನಾರ್ತ್ವೇ ಅವೆನ್ಯೂದ 1700 ಬ್ಲಾಕ್ನಲ್ಲಿರುವ ಹಿಂದೂ ದೇವಾಲಯಕ್ಕೆ ಅಧಿಕಾರಿಗಳನ್ನು ಕಳುಹಿಸಲಾಯಿತು. ಕಟ್ಟಡದ ಹೊರಭಾಗದ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಎರಚಿದ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಗೀಚುಬರಹವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ವಿಂಡ್ಸರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆನಡಾದ ವಿಂಡ್ಸರ್ನಲ್ಲಿ ದೇವಸ್ಥಾನದ ಮೇಲೆ ದಾಳಿ ಐದನೇ ಘಟನೆ ಇದಾಗಿದೆ.