ಲಂಡನ್, ಏ 04 (DaijiworldNews/MS): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಮಕ್ಕಳು ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡುವ ದುಷ್ಕರ್ಮಿಗಳು, ಗ್ಯಾಂಗ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಹೊಸ ಕಾರ್ಯಪಡೆಯೊಂದನ್ನು ಅನಾವರಣಗೊಳಿಸಿದ್ದಾರೆ’ ಎಂದು ಸೋಮವಾರ ಹೇಳಿದ್ದಾರೆ.
ಹೊಸ ಕಾರ್ಯಪಡೆಯಲ್ಲಿ ನುರಿತ ಅಧಿಕಾರಿಗಳಿದ್ದು, ಮಕ್ಕಳ ಲೈಂಗಿಕ ಶೋಷಣೆ ಮಾಡಿದ ಆರೋಪಿಗಳ ಪತ್ತೆಗೆ ಪೋಲಿಸ್ ಪಡೆಗಳಿಗೆ ಅಗತ್ಯ ನೆರವು ಒದಗಿಸಲಿದ್ದಾರೆ. ಅಲ್ಲದೆ ಲೈಂಗಿಕ ದೌರ್ಜನ್ಯಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ತನಿಖೆಗಳನ್ನು ನಡೆಸುತ್ತದೆ ಎಂದು ಹೇಳಿದ್ದಾರೆ
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ಅತಿಮುಖ್ಯವಾಗಿದೆ. ಹೀಗಾಗಿ ಅಪಾಯಕಾರಿ ಗ್ಯಾಂಗ್ಗಳನ್ನು ಮಟ್ಟಹಾಕಲು ಶ್ರಮಿಸುತ್ತೇವೆ ಎಂದು ಸುನಕ್ ಹೇಲಿದ್ದಾರೆ.