ನವದೆಹಲಿ, ಮಾ 31 (DaijiworldNews/DB): ಉದ್ಯಮಿ ಹಾಗೂ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟ್ವಿಟರ್ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಮಸ್ಕ್ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಾಖಲೆ ಮುರಿದಿದ್ದಾರೆ.
ಟ್ವಿಟರ್ ಮುಖ್ಯಸ್ಥ ತಮ್ಮದೇ ಸಂಸ್ಥೆಯಾದ ಟ್ವಿಟರ್ನಲ್ಲಿ 133 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಪ್ರತೀ ತಿಂಗಳು ಸರಾಸರಿ 450 ಮಿಲಿಯನ್ ಮಂದಿ ಟ್ವಿಟರ್ನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಈ ಪೈಕಿ 133 ಮಿಲಿಯನ್ ( ಶೇ.30 ರಷ್ಟು) ಬಳಕೆದಾರರು ಮಸ್ಕ್ ಅವರನ್ನು ಫಾಲೋ ಮಾಡುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಮಾಹಿತಿ ನೀಡಿದೆ.
2022ರ ಅಕ್ಟೋಬರ್ 27ರಂದು ಎಲೋನ್ ಮಸ್ಕ್ ಟ್ವಿಟರ್ ಮುಖ್ಯಸ್ಥರಾದರು. ಆ ವೇಳೆ 110 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಆದರೆ ಐದೇ ತಿಂಗಳಲ್ಲಿ ಫಾಲೋವರ್ಸ್ ಸಂಖ್ಯೆ 133 ಮಿಲಿಯನ್ಗೆ ಏರಿದೆ.
ಇನ್ನು ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಬರಾಕ್ ಒಬಾಮಾ ಕಳೆದ 30 ದಿನಗಳಲ್ಲಿ 267,585 ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ. ಬಳಿಕದ ಸ್ಥಾನದಲ್ಲಿದ್ದ ಜಸ್ಟಿನ್ ಬೈಬರ್ 118,950 ಅನ್ನು ಕಳೆದುಕೊಂಡಿದ್ದಾರೆ.