ಯುನೈಟೆಡ್ ಸ್ಟೇಟ್ಸ್, ಮಾ 30 (DaijiworldNews/DB): ಯುನೈಟೆಡ್ ಸ್ಟೇಟ್ಸ್ನಲ್ಲಿ ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್ಗಳ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದು ಬಂದಿಲ್ಲ.
ಎಂದಿನಂತೆ ಬುಧವಾರವೂ ಸೇನಾ ಹೆಲಿಕಾಪ್ಟರ್ಗಳು ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಆದರೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಎರಡು ಎಚ್ಎಚ್-60 ಬ್ಲಾಕ್ ಹಾಕ್ ಅಸಾಲ್ಟ್ ನ ಎರಡು ಹೆಲಿಕಾಪ್ಟರ್ಗಳ ನಡುವೆ ಢಿಕ್ಕಿ ಸಂಭವಿಸಿದೆ. ಟ್ರಿಗ್ ಕೌಂಟಿಯಲ್ಲಿ ತರಬೇತಿಯಲ್ಲಿದ್ದ ವೇಳೆ ಘಟನೆ ಸಂಭವಿಸಿದೆ.
ಕೆಂಟುಕಿ ಸ್ಟೇಟ್ ಪೋಲಿಸ್ ಮತ್ತು ರಾಜ್ಯದ ತುರ್ತು ನಿರ್ವಹಣಾ ವಿಭಾಗವು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದೆ. ಆದರೆ ಸಿಬಂದಿಯ ಸ್ಥಿತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.