ಕ್ಯಾಲಿಫೋರ್ನಿಯಾ, ಮಾ 27 (DaijiworldNews/MS): ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಮೂಲ ಕೋಡ್ನ ಭಾಗಗಳು, ಸಾಮಾಜಿಕ ನೆಟ್ವರ್ಕ್ ಚಾಲನೆಗೆ ಆಧಾರವಾಗಿರುವ ಕಂಪ್ಯೂಟರ್ ಕೋಡ್, ಆನ್ಲೈನ್ನಲ್ಲಿ ಸೋರಿಕೆಯಾಗಿದೆ ಎಂದು ಅಮೇರಿಕಾ ಮಾಧ್ಯಮಗಳು ಬಹಿರಂಗಪಡಿಸಿದೆ.
ಕಂಪನಿಯ ಕಾರ್ಯಾಚರಣೆಗೆ ನಿರ್ಣಾಯಕವಾಗಿರುವ ಈ ಮೂಲ ಕೋಡ್ ಗಳು ಕೆಲವು ಭಾಗಗಳನ್ನು ಸಾಫ್ಟ್ವೇರ್ ಡೆವಲಪರ್ಗಳ ಆನ್ಲೈನ್ ಸಹಯೋಗ ವೇದಿಕೆಯಾದ GitHub ಎಂಬ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಬಳಿಕ ಹಕ್ಕುಸ್ವಾಮ್ಯ ಉಲ್ಲಂಘನೆಯ ಸೂಚನೆಯನ್ನು ಕಳುಹಿಸುವ ಮೂಲಕ ಸೋರಿಕೆಯಾದ ಕೋಡ್ ಅನ್ನು ತೆಗೆದುಹಾಕಲು ಟ್ವಿಟರ್ ಸೂಚಿಸಿತ್ತು.
ಇದಲ್ಲದೆ ಕೋಡ್ ಅನ್ನು ಹಂಚಿಕೊಂಡ ವ್ಯಕ್ತಿ ಮತ್ತು ಅದನ್ನು ಡೌನ್ಲೋಡ್ ಮಾಡಿದ ಇತರ ವ್ಯಕ್ತಿಗಳನ್ನು ಗುರುತಿಸಲು GitHub ಗೆ ಆದೇಶಿಸುವಂತೆ ಟ್ವಿಟರ್ ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯವನ್ನು ಕೋರಿದೆ.