ಪಟ್ಟಾಯ (ಥೈಲ್ಯಾಂಡ್), ಮಾ 24 (DaijiworldNews/DB): ಬಂಗಿ ಜಂಪಿಂಗ್ ವೇಳೆ ವಯರ್ ತುಂಡಾಗಿ ಪ್ರವಾಸಿಗನೊಬ್ಬ ಕೆಳಗಿರುವ ಹೊಳೆಗೆ ಬಿದ್ದ ಘಟನೆ ಥೈಲ್ಯಾಂಡ್ನ ಪಟ್ಟಾಯದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರವಾಸಿಗರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಾಂಕಾಂಗ್ನ ಪ್ರವಾಸಿಗ ಮೈಕ್ ( 39) ಎಂಬಾತ ಥೈಲ್ಯಾಂಡ್ನ ಪಟ್ಟಾಯದಲ್ಲಿರುವ ಚಾಂಗ್ಥೈ ಥಪ್ರಾಯ ಅಡ್ವೆಂಚರ್ ಪಾರ್ಕ್ಗೆ ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರ ಸವಾಲು ಸ್ವೀಕರಿಸಿ ಬಂಗಿ ಜಂಪಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಜಂಪಿಂಗ್ ವೇಳೆ ವಯರ್ ತುಂಡಾಗಿ ಕೆಳಗಿರುವ ನದಿಗೆ ಬಿದ್ದಿದ್ದಾರೆ.
ನದಿಗೆ ಬಿದ್ದ ಮೈಕ್ ಅವರನ್ನು ಕೂಡಲೇ ನದಿಯಿಂದ ಮೇಲಕ್ಕೆತ್ತಲಾಗಿದ್ದು, ಆ ವೇಳೆ ಅವರು ಪ್ರಜ್ಞೆ ತಪ್ಪಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯದ ವೀಡಿಯೋವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.