ವಾಷಿಂಗ್ಟನ್, ಮಾ 16(DaijiworldNews/MS): ಅಮೇರಿಕಾದ ವಾಯುಪಡೆಯ ರಕ್ಷಣಾ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ. ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆ ಪೆಂಟಗನ್ ನಲ್ಲಿ ಪ್ರಮುಖ ನಾಯಕತ್ವದ ಹುದ್ದೆಯಾಗಿದೆ.
ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಪರವಾಗಿ 65 - ವಿರುದ್ದವಾಗಿ 29 ಮತಗಳನ್ನು ಗಳಿಸಿದ್ದು, ನಾಮನಿರ್ದೇಶನಗೊಂಡ ರವಿ ಚೌಧರಿಯನ್ನು ಆಯ್ಕೆ ಮಾಡಲಾಯಿತು. ರವಿ ಚೌಧರಿ ಈ ಹಿಂದೆ ಅಮೇರಿಕಾದ ಸಾರಿಗೆ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸಿದ್ದರು ಅಲ್ಲಿ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ, ವಾಣಿಜ್ಯ ಸ್ಥಳದ ಕಚೇರಿಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನಲ್ಲಿ ನಿರ್ದೇಶಕರಾಗಿದ್ದರು.
ರವಿ ಚೌಧರಿ, ಎಫ್ಎಎಯ ವಾಣಿಜ್ಯ ಬಾಹ್ಯಾಕಾಶ ಸಾರಿಗೆ ಮಿಷನ್ಗೆ ಬೆಂಬಲವಾಗಿ ಆಧುನಿಕ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಕ್ರಮಗಳ ಅನುಷ್ಠಾನದ ಹೊಣೆಗಾರಿಗೆ ನಿಭಾಯಿಸಿರುವ ಅನುಭವ ಹೊಂಡಿದ್ದಾರೆ.
1993 ರಿಂದ 2015 ರವರೆಗೆ ಅಮೇರಿಕಾದ ವಾಯುಪಡೆಯಲ್ಲಿ ಅವರ ಸೇವೆಯ ಸಮಯದಲ್ಲಿ, ಚೌಧರಿ ಅವರು ವಿವಿಧ ಕಾರ್ಯಾಚರಣೆ, ಎಂಜಿನಿಯರಿಂಗ್ ಮತ್ತು ಹಿರಿಯ ಸಿಬ್ಬಂದಿ ಕಾರ್ಯಯೋಜನೆಗಳನ್ನುನಿಭಾಯಿಸಿದ್ದರು. C-17 ಪೈಲಟ್ ಆಗಿ, ಅವರು ಅಫ್ಘಾನಿಸ್ತಾನ ಮತ್ತು ಇರಾಕ್ನಲ್ಲಿ ಹಲವಾರು ಯುದ್ಧ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಜಾಗತಿಕ ಹಾರಾಟದ ಕಾರ್ಯಾಚರಣೆಗಳನ್ನು ನಡೆಸಿದ್ದರು.