ಬೀಜಿಂಗ್, ಮಾ 11 (DaijiworldNews/DB): ಕ್ಸಿ-ಜಿನ್ ಪಿಂಗ್ ಅವರು ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚೀನಾ ಸಂಸತ್ತು ಸರ್ವಾನುಮತದಿಂದ ಕ್ಸಿ-ಜಿನ್ ಪಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಶುಕ್ರವಾರ ಆಯ್ಕೆ ಮಾಡಿತು. 2, 952 ಮತಗಳನ್ನು ಪಡೆದ ಅವರು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೆ ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಕ್ಸಿ-ಜಿನ್ ಪಿಂಗ್ ಪುನರಾಯ್ಕೆಗೊಂಡರು.
ಇದೇ ವೇಳೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಸಿ-ಜಿನ್ ಪಿಂಗ್, ದೇಶದ ಸಂವಿಧಾನಕ್ಕೆ ಬದ್ದನಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಕೋವಿಡ್ ನೀತಿಯಲ್ಲಿನ ಶೂನ್ಯತ್ವ ಹಾಗೂ ಅಸಂಖ್ಯಾತ ಜನರ ಸಾವಿನಿಂದಾಗಿ ಚೀನಾದಲ್ಲಿ ಕ್ಸಿ-ಜಿನ್ ಪಿಂಗ್ ವಿರುದ್ದ ಪ್ರತಿಭಟನೆಗಳು ನಡೆದಿದ್ದವು.