ಕಾಬೂಲ್, ಮಾ 10 (DaijiworldNews/DB): ಅಫ್ಘಾನಿಸ್ತಾನದ ಮಜಾರ್-ಇ-ಷರೀಫ್ ಪ್ರದೇಶದಲ್ಲಿ ಗುರುವಾರ ಬಾಂಬ್ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಪ್ರಾಂತೀಯ ಗವರ್ನರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಈ ಕುರಿತು ತಾಲಿಬಾನ್ ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದು, ಗವರ್ನರ್ ದಾವೂದ್ ಮುಜ್ಮಲ್ ಸಹಿತ ಮೂವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ದಾವೂದ್ ಮುಜ್ಮಲ್ ತಾಲಿಬಾನ್ ಆಡಳಿತದಿಂದ ಗವರ್ನರ್ ಆಗಿ ನೇಮಕಗೊಂಡಿದ್ದರು. ಅವರ ಕಚೇರಿಯೊಳಗೇ ಬಾಂಬ್ ಸ್ಪೋಟಗೊಂಡಿದೆ ಎಂದು ತಿಳಿಸಿದ್ದಾರೆ.
ಬಾಂಬ್ ಸ್ಪೋಟದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಸಂಘಟನೆಯೂ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ. ತಾಲಿಬಾನ್ ವಿರೋಧಿ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ನ ಖೊರಾಸನ್ ಘಟಕವು ಸ್ಪೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬೀಬುಲ್ಲಾ ಮುಜಾಹಿದ್ ತಿಳಿಸಿರುವುದಾಗಿ ವರದಿಯಾಗಿದೆ.