ವಾಷಿಂಗ್ಟನ್, ಮಾ 08 (DaijiworldNews/HR): ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ-ಅಮೆರಿಕನ್ ವಕೀಲ ಅರುಣ್ ಸುಬ್ರಮಣಿಯನ್ ಅವರನನು ನೇಮಕ ಮಾಡಲಾಗಿದೆ.
ನ್ಯೂಯಾರ್ಕ್ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿರುವುದನ್ನ ಯುಎಸ್ ಸೆನೆಟ್ ಮಂಗಳವಾರ ಸಂಜೆ 58-37 ಮತಗಳಿಂದ ದೃಢಪಡಿಸಿದೆ.
ಇನನು ಈ ಬಗ್ಗೆ ಮಾತನಾಡಿದ ಸೆನೆಟ್ ನಾಯಕ ಚಕ್ ಶುಮರ್, 'ನಾವು ಅರುಣ್ ಸುಬ್ರಮಣಿಯನ್ ಅವರನ್ನ ಎಸ್ಡಿಎನ್ಐ ನ್ಯಾಯಾಧೀಶರಾಗಿ ದೃಢಪಡಿಸಿದ್ದೇವೆ. ಅವರು ಅನಿವಾಸಿ ಭಾರತೀಯರ ಮಗನಾಗಿದ್ದು, ಈ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.