ಒಟ್ಟಾವಾ, ಫೆ 23 (DaijiworldNews/DB): ಬರೋಬ್ಬರಿ 3ಗಂಟೆ ಕಾಲ ಹೃದಯ ಬಡಿತ ನಿಂತಿದ್ದ ಮಗುವೊಂದಕ್ಕೆ ವೈದ್ಯರು ಮರುಜೀವ ನೀಡಿದ ಘಟನೆ ಕೆನಡಾದ ನೈಋತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿ ನಡೆದಿದೆ.
ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ ಇದ್ದುದರಿಂದ ನೀರು ತುಂಬಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರಿಲ್ಲದಿದ್ದರೂ ಇದ್ದವರೇ ಸೇರಿ ಮಗುವಿನ ಚಿಕಿತ್ಸೆಯಲ್ಲಿ ತೊಡಗಿದ್ದರು. ಆ ವೇಳೆಗಾಗಲೇಎ ಮಗುವಿಮ ಹೃದಯ ಬಡಿತವೂ ಸ್ತಬ್ದವಾಗಿದ್ದನ್ನು ಗಮನಿಸಿ ವೈದ್ಯರು ಆತನಿಗೆ ಸಿಪಿಆರ್ ನೀಡಿದ್ದಾರೆ. ಇನ್ನು ಚಿಕಿತ್ಸಾನಿರತ ವೈದ್ಯರಿಗೆ ಲಂಡನ್ ನ ತಜ್ಞರ ತಂಡವೊಂದು ಮಾರ್ಗದರ್ಶನ ನೀಡುತ್ತಿತ್ತು. ಮೂರು ಗಂಟೆ ಕಳೆದ ಬಳಿಕ ಮಗು ಉಸಿರಾಟ ಆರಂಭಿಸಿದೆ.
ಫೆಬ್ರವರಿ 6ರಂದು ಈತ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಸಿಪಿಆರ್ ಕೊಟ್ಟ ಪರಿಣಾಮ ಆತನನ್ನು ಬದುಕಿಸಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.