ಲಂಡನ್, ಫೆ 18 (DaijiworldNews/DB): ಭಾರತ ಮೂಲದ ಮೇಘನಾ ಪಂಡಿತ್ ಅವರು ಬ್ರಿಟನ್ನ ಪ್ರತಿಷ್ಟಿತ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಸ್ಪಿಟಲ್ಸ್ ಎನ್ಎಚ್ಎಸ್ ಫೌಂಡೇಷನ್ ಟ್ರಸ್ಟ್ನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಮೇಘನಾ ಅವರು ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯೊಂದರ ಅಧ್ಯಕ್ಷೆಯಾದ ಮೊದಲ ಭಾರತೀಯ ಅನಿವಾಸಿ ಮಹಿಳೆ ಹಾಗೂ ಬ್ರಿಟನ್ ಇತಿಹಾಸದಲ್ಲೇ ಸಿಇಒ ಆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಇನ್ನು ಅವರು ಕಳೆದ ವರ್ಷ ಜುಲೈಯಿಂದಲೇ ಈ ಸಂಸ್ಥೆಯ ಹಂಗಾಮಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಪೂರ್ಣಾವಧಿಗೆ ಸಿಇಒ ಆಗಿ ನೇಮಕ ಮಾಡಲಾಗಿದ್ದು, ಮಾರ್ಚ್ ಮೊದಲ ದಿನದಿಂದ ಅವರು ಪೂರ್ಣಾವಧಿಯ ಸಿಇಒ ಆಗಿ ಕರ್ತವ್ಯ ಆರಂಭಿಸಲಿದ್ದಾರೆ.
ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಮೇಗನಾ ಬಾಂಬೆ ವಿವಿಯಲ್ಲಿ ಎಂಬಿಬಿಎಸ್ ಪದವೀಧರೆ. ಎಂಬಿಬಿಎಸ್ ಪದವಿ ಬಳಿಕ ಬ್ರಿಟನ್ನಲ್ಲಿ ನೆಲೆಸಿರುವ ಅವರು ಹಲವು ಹುದ್ದೆಗಳನ್ನು ಅಲಂಕರಿಸಿದ ಅನುಭವಿ. ಹೊಸ ಹುದ್ದೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಇಒ, ದೊಡ್ಡ ಹುದ್ದೆಯ ಜವಾಬ್ದಾರಿ ನೀಡಿದ್ದಕ್ಕೆ ನಾನು ಟ್ರಸ್ಟ್ನ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿ ನನ್ನ ಸೇವೆಯನ್ನು ನೀಡುತ್ತೇನೆ ಎಂದಿದ್ದಾರೆ.