ನ್ಯೂಜಿಲೆಂಡ್,ಮಾ 15 (MSP): ನ್ಯೂಜಿಲೆಂಡ್ ನ ದಕ್ಷಿಣ ಐಲೆಂಡ್ ಹಾಗೂ ಕ್ರೈಸ್ಟರ್ಚ್ ನಗರದಲ್ಲಿ ನ ಹ್ಯಾಗ್ಲೆಯಲ್ಲಿ ಬಂಧೂಕುಧಾರಿಯೊಬ್ಬ ಮಸೀದಿಯತ್ತ ಗುಂಡಿನ ದಾಳಿ ನಡೆಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಬಾಂಗ್ಲಾ ಕ್ರಿಕೆಟ್ ತಂಡದ ಆಟಗಾರರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಮಧ್ಯಾಹ್ನನ 1.45 ಕ್ಕೆ ಪ್ರಾರ್ಥನೆ ವೇಳೆ ಈ ದಾಳಿ ನಡೆದಿದೆ.
ದಾಳಿಯ ಪರಿಣಾಮದ ಬಗ್ಗೆ ನ್ಯೂಜಿಲೆಂಡ್ ಸರ್ಕಾರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಘಟನೆಯಲ್ಲಿ ನಂತರ ಸತ್ತವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಅಲ್ಲದೆ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನ್ಯೂಜಿಲೆಂಡ್ ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದ. ಈ ದಾಳಿ ಕ್ರಿಕೆಟ್ ಆಟಗಾರರನ್ನು ಗುರಿಯಾಗಿಸಿಕೊಂಡೇ ನಡೆದಿದೆ ಎನ್ನುವ ಅನುಮಾನ ಕಾಡಿದೆ.
''ಮಸೀದಿ ಒಳಗೆ ಹೋಗಬೇಕು ಎನ್ನುವ ಶೂಟೌಟ್ ನಡೆಸಿದರು.ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡೆವು. ಅಲ್ಲನೇ ನಮ್ಮನ್ನು ಕಾಪಾಡಿದ್ದಾನೆ'' ಎಂದು ಬಾಂಗ್ಲಾ ಆಟಗಾರ ಮುಷ್ಟಿಕರ್ ರಹೀಂ ಟ್ವೀಟ್ ಮಾಡಿದ್ದಾನೆ.
ಘಟನೆಗೆ ಸಂಬಂಧಪಟ್ಟಂತೆ ಅಲ್ಲಿನ ಪೊಲೀಸರು 4 ಜನರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಒಬ್ಬಾಕೆ ಮಹಿಳೆಯಾಗಿದ್ದು ಮತ್ತೋರ್ವ ಆಸ್ಟ್ರೇಲಿಯಾ ಪ್ರಜೆಯಾಗಿದ್ದಾನೆ.ಘಟನೆಯ ಹಿನ್ನಲೆಯಲ್ಲಿ ನಾಳೆ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ನಡೆಯಬೇಕಿದ್ದ 3ನೇ ಟೆಸ್ಟ್ ಪಂದ್ಯ ಕೂಡ ರದ್ದಾಗಿದೆ.