ಸ್ಯಾನ್ ಫ್ರಾನ್ಸಿಸ್ಕೋ, ಡಿ 03(DaijiworldNews/MS): "ಭಾರತವು ನನ್ನ ಬದುಕಿನ ಭಾಗವಾಗಿದ್ದು ನಾನು ಎಲ್ಲಿಗೆ ಹೋದರು ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ" ಎಂದು ಗೂಗಲ್ ಮತ್ತು ಅಲ್ಫಾಬೆಟ್ ಸಿಇಓ ಸುಂದರ್ ಪಿಚೈ ಹೇಳಿದ್ದಾರೆ.
ಸ್ಯಾನ್ ಫ್ರಾನ್ಸಿಕೋದಲ್ಲಿ ತಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಮೆರಿಕದ ಭಾರತೀಯ ರಾಯಭಾರಿಯಿಂದ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ "ಪದ್ಮಭೂಷಣ ಪ್ರಶಸ್ತಿ" ಸ್ವೀಕರಿಸಿ ಮಾತನಾಡಿದ ಅವರು, 'ಈ ಅಪಾರವಾದ ಗೌರವಕ್ಕೆ ಭಾರತ ಮತ್ತು ಭಾರತೀಯರಿಗೆ ಎಂದಿಗೂ ಕೃತಜ್ಞನಾಗಿರುತ್ತೇನೆ' ಎಂದು ಹೇಳಿದ್ದಾರೆ
'ಭಾರತವು ನನ್ನನ್ನು ರೂಪಿಸಿದ ದೇಶವಾಗಿದ್ದು ಇದೀಗ ನನ್ನನ್ನು ಅದೇ ದೇಶ ಈ ರೀತಿಯಾಗಿ ಗೌರವಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ' ಎಂದು ಹೇಳಿದ್ದಾರೆ
ಸುಂದರ್ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ 2022ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.