ಲಂಡನ್, ಮೇ 1 (DaijiworldNews/MS): ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ (ಪಿಎನ್ಬಿ) ₹ 13500 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ಅಲ್ಲಿನ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕೆಳ ನ್ಯಾಯಾಲಯವು ಹಸ್ತಾಂತರಿಸುವ ಆದೇಶದ ವಿರುದ್ಧದ 28 ದಿನಗಳ ಒಳಗೆ ಯುಕೆ ಹೈಕೋರ್ಟ್ ಮೊರೆ ಹೋಗುವ ಅವಕಾಶವಿತ್ತು. ಈ ಹಿನ್ನಲೆಯಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರದ 570 ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡಿಗೆ ಪರಾರಿಯಾದ ಆರೋಪದಲ್ಲಿ ನೀರವ್ ಮೋದಿ ಪ್ರಮುಖ ದೋಷಿ ಎಂದು ಇಂಗ್ಲೆಂಡಿನ ಕೆಳ ನ್ಯಾಯಾಲಯ ತೀರ್ಪು ನೀಡಿತ್ತು.
2019ರ ಮಾರ್ಚ್ 19ರಂದು ನೀರವ್ ಮೋದಿಯ ಬಂಧನವಾದ ನಂತರ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತವಾಗುತ್ತಾ ಬಂದಿದ್ದು ಲಂಡನ್ ನ ವಂಡ್ಸ್ ವರ್ತ್ ಜೈಲಿನಲ್ಲಿದ್ದಾರೆ. ಕಳೆದ ಏಪ್ರಿಲ್ 16ರಂದು ಇಂಗ್ಲೆಂಡ್ ಸರ್ಕಾರದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ನೀರವ್ ಮೋದಿಯ ಗಡೀಪಾರಿಗೆ ಸಹಿ ಹಾಕಿದ್ದರು.