ಜೆರುಸಲೇಂ, ಜ.10 (DaijiworldNews/PY): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೊರೊನಾ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ.

ಬಳಿಕ ಮಾತನಾಡಿದ ಅವರು, "ಇಸ್ರೇಲ್ನಲ್ಲಿ ಈಗಾಗಲೇ ಶೇ.20ರಷ್ಟು ಜನತೆಗೆ ಕೊರೊನಾ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ. ದೇಶದ ಎಲ್ಲಾ ವಯಸ್ಕರಿಗೆ ಮಾರ್ಚ್ ತಿಂಗಳೊಳಗೆ ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಕೂಡಾ ನೀಡಲಾಗುವುದು" ಎಂದಿದ್ದಾರೆ.
ಇಸ್ರೇಲ್ನಲ್ಲಿ ಸದ್ಯ ಮೂರನೇ ಬಾರಿಗೆ ರಾಷ್ಟ್ರವ್ಯಾಪ್ತಿ ಲಾಕ್ಡೌನ್ ಹೇರಲಾಗಿದ್ದು, ಶಾಲಾ-ಕಾಲೇಜು ಸೇರಿದಂತೆ ಕಚೇರಿಗಳನ್ನು ಮುಚ್ಚಲಾಗಿದೆ. ಅವಶ್ಯಕತೆ ಇದ್ದಲ್ಲಿ ಮಾತ್ರವೇ ಮನೆಯಿಂದ ಹೊರಬರುವಂತೆ ಸೂಚನೆ ನೀಡಲಾಗಿದೆ.