ಕುವೈಟ್, ಮಾ. 12 (Daijiworld News/MB) : ವಿಶ್ವದಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕುವೈಟ್ನಲ್ಲಿ ಇಂದಿನಿಂದ ಇನ್ನು 2 ವಾರಗಳ ಕಾಲ ಎಲ್ಲಾ ಸರ್ಕಾರಿ ಹಾಗೂ ಖಾಸಗೀ ಸಂಸ್ಥೆಗಳು ಕಾರ್ಯ ನಿರ್ವಹಿಸುವುದಿಲ್ಲ. ಹಾಗೆಯೇ ಇನ್ನು ಮಾರ್ಚ್ 29 ರ ಭಾನುವಾರದಂದು ಕಾರ್ಯಗಳು ಪುನರಾರಂಭಗೊಳ್ಳಲಿದೆ. ಗಲ್ಫ್ ರಾಷ್ಟ್ರಗಳ ಸಚಿವರ ಕೌನ್ಸಿಲ್ ಈ ತೀಮಾರ್ನವನ್ನು ಕೈಗೊಂಡಿದೆ.
ಹಾಗೆಯೇ ಕೌನ್ಸಿಲ್ ಮಾರ್ಚ್ 13 ರಿಂದ ಎಲ್ಲಾ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು ಮುಂದಿನ ಆದೇಶ ಬರುವವರೆಗೂ ವಿಮಾನ ಸಂಚಾರವಿರುವುದಿಲ್ಲ.
ದೇಶದ ನಾಗರಿಕರಿಗೆ, ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.
ಜನರಿಗೆ ಹೊಟೇಲ್ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದ್ದು ಮಾಲ್ಗಳ ಪ್ರವೇಶಕ್ಕೂ ನಿರ್ಬಂಧಿಸಲಾಗಿದೆ.
ಹಾಗೆಯೇ ಆರೋಗ್ಯ ಕೇಂದ್ರಗಳು, ಕ್ಲಬ್ಗಳಲ್ಲಿ ಜನರು ಹೆಚ್ಚಾಗಿ ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳು, ಕ್ಲಬ್ಗಳನ್ನು ಕೂಡಾ ಮುಚ್ಚಲು ಆದೇಶಿಸಲಾಗಿದೆ.