ಟೆಹ್ರಾನ್, ಮಾ 10 (Daijiworld News/MSP): ಇರಾನ್ ನಲ್ಲಿ ಕೊರೊನಾ ವೈರಸ್ ನಿಂದ ಪಾರಾಗುವ ಸಲುವಾಗಿ ಮಧ್ಯ ಸೇವನೆ ಉತ್ತಮ ಎಂದು ಕಳ್ಳ ಭಟ್ಟಿಯನ್ನು ಕುಡಿದ ಪರಿಣಾಮ 27 ಮಂದಿ ಸಾವನ್ನಪ್ಪಿ, ಹಲವು ವ್ಯಕ್ತಿಗಳು ಅಸ್ವಸ್ಥರಾದ ಘಟನೆ ಬೆಳಕಿಗೆ ಬಂದಿದೆ.
ಇರಾನ್ ನಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ಇಲ್ಲಿಯವರೆಗೆ 237 ಜನರು ಸಾವನ್ನಪ್ಪಿದ್ದಾರೆ, ಮಾತ್ರವಲ್ಲದೆ 7,161 ಜನರಿಗೆ ಸೋಂಕು ತಗುಲಿದೆ. ಈ ನಡುವೆ ಕೊರೊನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಮದ್ಯಸೇವನೆ ಸೂಕ್ತ ಜೌಷಧಿ ಎನ್ನುವ ವದಂತಿ ದಟ್ಟವಾಗಿ ಹಬ್ಬಿದ್ದು ಇದನ್ನು ನಂಬಿದ ಜನ ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿದ್ದಾರೆ.
ಇರಾನ್ ನ ನೈಋತ್ಯ ಪ್ರದೇಶದ ಖುಜೆಸ್ತಾನ್ ನಲ್ಲಿ 20 ಮಂದಿ ಹಾಗೂ ಉತ್ತರ ಭಾಗದ ಅಲ್ಬೋರ್ಜ್ 7 ಮಂದಿ ಸಾವನ್ನಪ್ಪಿದ್ದಾರೆ. ಕಳ್ಳ ಭಟ್ಟಿಯಲ್ಲಿದ್ದ ಮೆಥನಾಲ್ ಸೇವನೆಯಿಂದಾಗಿ 27 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಹೇಳಿದೆ.