ವುಹಾನ್, ಫೆ 06 (Daijiworld News/MB) : ತನ್ನನ್ನು ಅತ್ಯಾಚಾರ ಮಾಡಲು ಬಂದವನಿಗೆ ತನಗೆ ಕೊರೋನಾ ವೈರಸ್ ಇದೆ ಎಂದು ಸುಳ್ಳು ಹೇಳಿ ಭಯ ಹುಟ್ಟಿಸಿ ಆತನನ್ನು ಅಲ್ಲಿಂದ ಓಡಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಆರೋಪಿ ಕ್ಸಿಯಾವೋ (25) ಯುವತಿ ಮನೆಯಲ್ಲಿ ಒಬ್ಬಂಟಿಯಾಗಿರುವ ಹೊತ್ತಿನಲ್ಲಿ ಆಕೆಯ ಕೋಣೆಗೆ ನುಗ್ಗಿದ್ದು ಅತ್ಯಾಚಾರ ಮಾಡಲು ಮಂದಾಗಿದ್ದಾನೆ. ಈ ಸಂದರ್ಭದಲ್ಲಿ ಯುವತಿಯು ಕೆಮ್ಮುತ್ತಾ "ನಾನು ವುಹಾನ್ನಿಂದ ಮರಳಿದ್ದೇನೆ, ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದೇನೆ. ಆ ಹಿನ್ನಲೆಯಲ್ಲಿ ಯಾರ ಸಂಪರ್ಕಕ್ಕೂ ಬರದೆ ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ" ಎಂದು ಹೇಳಿದ್ದಾಳೆ.
ಈ ಸಂದರ್ಭದಲ್ಲಿ ಹೆದರಿದ ಆರೋಪಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಆದರೆ ಮನೆಯಲ್ಲಿ ದರೋಡೆ ಮಾಡಿದ್ದಾನೆ.
ಪೊಲೀಸರು ಈಗಾಗಲೇ ಆತನ ಬಂಧನ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.