ಲಾಹೋರ್, ಜ 04 (Dajiworld News/MB) : ಸಿಖ್ ಧರ್ಮದ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಮುಸ್ಲಿಂ ವ್ಯಕ್ತಿಯ ಕುಟುಂಬಸ್ತರು ತಮ್ಮ ಸಂಬಂಧಿಗಳ ಬಂಧನ ಮಾಡಿರುವುದನ್ನು ಖಂಡನೆ ಮಾಡಿ ಲಾಹೋರ್ನಲ್ಲಿರುವ ನಂಕನಾ ಸಾಹಿಬ್ ಗುರುದ್ವಾರ ಹತ್ತಿರ ಧರಣಿ ನಡೆಸಿದ್ದಾರೆ.
ಹಸ್ಸನ್ ಎಂಬ ವ್ಯಕ್ತಿ 18 ವರ್ಷದ ಜಗಜಿತ್ ಕೌರ್ ಎಂಬ ಸಿಖ್ ಯುವತಿಯನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಪಹರಣ ಮಾಡಿ ಆಕೆಯನ್ನು ಮುಸ್ಲಿಮ್ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುದ್ವಾರದ ಬಳಿ ಗುಂಪು ಘರ್ಷಣೆ ನಡೆದಿದ್ದು ಆಕ್ರೋಷದಲ್ಲಿದ್ದ ನಿವಾಸಿಗಳು ನಾನಾ ಸಾಹಿಬ್ ಬಳಿ ನಿಖ್ ಯಾತ್ರಿಕರ ಮೇಲೆ ಕಲ್ಲೆಸಿದ್ದಾರೆ. ಹಾಗೆಯೇ ನಂಕನಾ ಸಾಹಿಬ್ ಹತ್ತಿರ ಸಿಖ್ ಸಮುದಾಯದವರ ಮೇಲೆ ಹಿಂಸಾಚಾರ ಮಾಡಿದ್ದಾರೆ. ಇದನ್ನು ಭಾರತ ಖಂಡನೆ ಮಾಡುತ್ತದೆ. ಸಿಖ್ ಸಮುದಾಯದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಪವಿತ್ರ ಗುರುದ್ವಾರವನ್ನು ಅಪವಿತ್ರಗೊಳಿಸಿದ ಮತ್ತು ಅಲ್ಪಸಂಖ್ಯಾತ ಸಿಖ್ ಸಮುದಾಯದವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಪಾಕಿಸ್ತಾನ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.