ವಾಷಿಂಗ್ಟನ್, ಜ.01 (Daijiworld News/PY) : ಇರಾನಿನ ಪರ ಪ್ರತಿಭಟನಾಕಾರರು ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಅಮೆರಿಕ 750 ಸೈನಿಕರನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ಮುಂದಾಗಿದೆ.
ಈ ಬಗ್ಗೆ ಮಂಗಳವಾರ ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮಾತನಾಡಿ, ಇರಾನಿನ ಪರ ಪ್ರತಿಭಟನಾಕಾರರು ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ ಕಾರಣ ಅಮೇರಿಕ ತಕ್ಷಣವೇ ಮಧ್ಯಪ್ರಾಚೀನಕ್ಕೆ ಕಳುಹಿಸಲು ಸೈನ್ಯವನ್ನು ನಿಯೋಜಿಸಲಿದೆ ಎಂದು ತಿಳಿಸಿದ್ದಾರೆ.
ದಾಳಿ ನಡೆಸಿದ ಹಿನ್ನೆಲೆ ಅಮೆರಿಕವು ಸರಿಸುಮಾರು 750 ಸೈನಿಕರನ್ನು ಮಧ್ಯಪ್ರಾಚ್ಯಕ್ಕೆ ತಕ್ಷಣವೇ ಕಳುಹಿಸಲಿದ್ದು, ಮುಂದಿನ ದಿನಗಳಲ್ಲಿ ಐಆರ್ಎಫ್ನಿಂದ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗುತ್ತದೆ ಎಂದು ಪೆಂಟಗನ್ ಮುಖ್ಯಸ್ಥರು ಮಂಗಳವಾರ ಸಂಜೆ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಾಗ್ದಾದ್ನ ಅಮೆರಿಕ ರಾಯಭಾರಿ ಕಛೇರಿ ಮೇಲೆ ನಡೆಸಿದ ದಾಳಿಯ ಹಿನ್ನೆಲೆ, ಈ ನಿಯೋಜನೆಯು ಯುಎಸ್ ಸಿಬ್ಬಂದಿ ಮತ್ತು ಸೌಲಭ್ಯಗಳ ವಿರುದ್ಧವಾಗಿ ಬೆದರಿಕೆ ಮಟ್ಟದಲ್ಲಿ ಪ್ರತಿಕ್ರಿಯೆಯಾಗಿ ತೆಗೆದುಕೊಳ್ಳಲಾದ ಸೂಕ್ತ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂದು ಎಸ್ಪರ್ ತಿಳಿಸಿದ್ಧಾರೆ.
ಇರಾಕ್ನಲ್ಲಿ ಭಾನುವಾರ ನಡೆದ ಯುಎಸ್ ದಾಳಿಯಲ್ಲಿ ಹತ್ಯೆಯಾದ ಹಶ್ದ್ ಶಾಬಿ ಸದಸ್ಯರ ಬಗ್ಗೆ ಶೋಕ ವ್ಯಕ್ತಪಡಿಸಿದ ನೂರಾರು ಪ್ರತಿಭಟನಾಕಾರರು ಬಾಗ್ದಾದ್ನ ಹಸಿರು ವಲಯದಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ನುಗ್ಗಿ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಪೆಂಟಗನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.