ಮಾಸ್ಕೋ, ಡಿ 29(Daijiworld News/PY) : ಹೆರಿಗೆ ನೋವಿನಿಂದ ನರಳುತ್ತಿದ್ದ ಜಿರಳೆಯೊಂದಕ್ಕೆ ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ ವಿಸ್ಮಯಕಾರಿ ಘಟನೆ ರಷ್ಯಾದ ಸೈಬೀರಿಯಾ ಪ್ರಾಂತ್ಯದ ಕ್ರಾಸ್ನೋಯಾಸ್ಕ್ನ್ನಲ್ಲಿ ನಡೆದಿದೆ.
ಕ್ರಾಸ್ನೋಯಾಸ್ಕ್ ನಗರದ ವ್ಯಕ್ತಿಯೊಬ್ಬರು ದಕ್ಷಿಣ ಅಮೆರಿಕದ ಅರಣ್ಯಗಳಲ್ಲಿ ಕಂಡು ಬರುವ ಸುಮಾರು 8 ಸೆಂ.ಮೀ.ವರೆಗೆ ಬೆಳೆಯಬಲ್ಲ ಜಿರಳೆಯನ್ನು ತಂದು, ಅದಕ್ಕೆ “ಆರ್ಚಿಮ್ಯಾಂಡ್ರಿಟಾ’ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಆದರ ಆರೈಕೆ ಮಾಡುತ್ತಿದ್ದ ಮಾಲಕರಿಗೆ ಅದೊಂದು ದಿನ ಹೆರಿಗೆ ನೋವಿನಿಂದ ಸಂಕಷ್ಟ ಅನುಭವಿಸುತ್ತಿರುವುದು ಕಂಡುಬಂತು. ತಕ್ಷಣವೇ ಅದನ್ನು ನಗರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡುಹೋಗಿದ್ದಾರೆ.
ಬಳಿಕ ವೈದ್ಯಕೀಯ ಪರೀಕ್ಷೆಯ ವೇಳೆ ಜಿರಳೆಯ ಹೊಟ್ಟೆಯಲ್ಲಿದ್ದ ಮೊಟ್ಟೆಯ ಚೀಲಗಳು ಜಿರಳೆಯ ಮೊಟ್ಟೆಗಳನ್ನು ಆಚೆ ಬಾರದಂತೆ ಅಡ್ಡವಾಗಿದೆ ಎಂದು ತಿಳಿದ ವೈದ್ಯರು ಜಿರಳೆಗೆ ಸಣ್ಣದಾದ ಇಂಜೆಕ್ಷನ್ ಹಾಗೂ ಅನಿಲ ವಿಧಾನಗಳ ಮೂಲಕ ತಾತ್ಕಾಲಿಕ ಅರವಳಿಕೆ ನೀಡಿ ಇಡೀ ಮೊಟ್ಟೆ ಚೀಲವನ್ನು ಹೊರತೆಗೆದಿದ್ದಾರೆ. ಈಗ ಜೆರಳೆ ಹಾಗೂ ಅದರ ಮೊಟ್ಟೆಗಳು ಸುರಕ್ಷಿತವಾಗಿದೆ ಎಂದ ವೈದ್ಯರು ಶಸ್ತ್ರಚಿಕಿತ್ಸೆಯ ವೀಡಿಯೋವನ್ನು ಸಾಮಾಜಿಕಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.