ವಾಷಿಂಗ್ಟನ್, ಡಿ 21 (Daijiworld News/PY) : ಅಮೇರಿಕಾ ಸಂಸತ್ ನಲ್ಲಿ ಭಾರತ ಸರ್ಕಾರವು ಕಾಶ್ಮೀರದ ಮೇಲೆ ತೆಗೆದುಕೊಂಡ ನಿಷೇಧಾತ್ಮಕ ಹೆಜ್ಜೆಯನ್ನು ಹಿಂದಿಡಬೇಕು ಎಂಬುದರ ಬಗ್ಗೆ ಟೀಕಿಸಿದ ಭಾರತೀಯ ಮೂಲದ ಅಮೇರಿಕ ಸಂಸದೆ ಪ್ರಮೀಳಾ ಜಯಪಾಲ್ ಭೇಟಿಯಾಗಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ನಿರಾಕರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜೈ ಶಂಕರ್, ಈ ವರದಿಯ ಬಗ್ಗೆ ಭಾರತ ಯಾವ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿಲ್ಲ, ಪ್ರಮೀಳಾ ಜಯಪಾಲ್ ಅವರ ನೇತೃತ್ವದ ನಿಯೋಗವನ್ನು ನಾನು ಭೇಟಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯದ ಪರಿಸ್ಥಿಯಲ್ಲಿ ಪೌರತ್ವ ಕಾಯ್ದೆಯ ಪ್ರತಿಭಟನೆಯು ತೀವ್ರವಾದ ರೂಪವನ್ನು ಪಡೆದುಕೊಂಡಿದ್ದು, ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಯ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪೊಂಪೊ ಜತೆಗಿನ ಮಾತುಕತೆ ವೇಳೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ. ಘಟನೆ ಹಿನ್ನೆಲೆ ವಶಕ್ಕೆ ಪಡೆಯಲಾಗಿದ್ದ ಕೆಲವರ ಬಿಡುಗಡೆಯನ್ನು ಮತ್ತು ಹೇರಲಾಗಿದ್ದ ನಿಷೇಧಾತ್ಮಕ ಕ್ರಮಗಳನ್ನು ಹಿಂಪಡೆದಿರುವುದನ್ನು ಅಮೇರಿಕ ಒಪ್ಪಿಗೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಕೂಡ ಪ್ರಸ್ತಾಪಿಸಿ, ಚರ್ಚಿಸಲಾಗಿದೆ ಎಂದರು.