ಇಂಗ್ಲೇಂಡ್, ಡಿ 17 (Daijiworld News/PY): ಹೆಚ್ಚಿನ ಜನಕ್ಕೆ ಕಾರಿನ ಮೇಲೆ ಅತಿಯಾದ ವ್ಯಾಮೋಹ ಇರುತ್ತೆ. ತಮ್ಮ ಕಾರ್ ಸ್ವಚ್ಚ, ಸುಂದರ, ಪರಿಮಳಯುಕ್ತವಾಗಿರಬೇಕು ಎಂದು ಒಂದಿಲ್ಲೊಂದು ಕಸರತ್ತು ಮಾಡುತ್ತಿರುತ್ತಾರೆ. ಆದರೆ ಕಾರು ಮಾಲೀಕ ತಾನು ಮಾಡಿದ ಸಣ್ಣ ತಪ್ಪಿನಿಂದ ಕಾರ್ ಕಳೆದುಕೊಂಡಿದ್ದಾನೆ.
ಮಾಲಕನೊಬ್ಬ ತನ್ನ ಕಾರ್ ಕೂಡಾ ಸುವಾಸನೆಯುಕ್ತವಾಗಿರಬೇಕು ಎಂದು ಹಿಂದಿನ ಸೀಟ್ ಗೆ ಏರ್ ಫ್ರೆಶ್ನರ್ ಹಾಕಿ ಚಾಲನೆ ಮುಂದುವರಿಸಿದ್ದಾನೆ. ಈ ವೇಳೆ ಸಿಗ್ನಲ್ ನಲ್ಲಿ ಕಾಯುವ ವೇಳೆ ಸಿಗರೇಟ್ ಹಚ್ಚಿದ್ದಾನೆ ಅಷ್ಟೇ, ಆ ಕ್ಷಣವೇ ಕಾರು ಏಕಾಏಕಿ ಸ್ಪೋಟವಾಗಿದೆ. ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗಳ ನಡುವೆ ಹೇಗೆ ಕಾರಿನ ಕಿಟಕಿ ಮೂಲಕ ಹೊರಬಂದಿದ್ದಾನೆ. ನೆರೆದವರು ತಕ್ಷಣವೇ ಆತನನ್ನು ಆಸ್ಪತ್ರೆಗೆ ಧಾವಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆ ಇಂಗ್ಲೇಡ್ ನ ಪಶ್ಚಿಮ ಯಾಕ್ ಶಿರೆಯಲ್ಲಿ ನಡೆದಿದೆ. ಕಾರಿನ ಕಿಟಕಿ ಮುಚ್ಚಿದ್ದ ವೇಳೆ ಏರ್ ಫ್ರೆಶ್ನರ್ ನ ಗ್ಯಾಸ್ ಉಳಿದುಕೊಂಡಿದ್ದ ಪರಿಣಾಮ ಸಿಗರೇಟ್’ಗಾಗಿ ಲೈಟರ್ ಬಳಸಿದ ತಕ್ಷಣ ಸ್ಪೋಟ ಸಂಭವಿಸಿದೆ. ಹೀಗಾಗಿ ಕಾರಿನಲ್ಲಿ ಏರ್ ಫ್ರೆಶ್ನರ್ ಬಳಸುವ ಮುನ್ನ ಎಚ್ಚರವಹಿಸಿ. ಏರ್ ಫ್ರೆಶ್ನರ್ ನಲ್ಲಿ ರಾಸಾಯನಿಕಯುಕ್ತ ಗ್ಯಾಸ್ ಹೊರಹೋಗುವಂತೆ ಕಾರ್ ವಿಂಡೋ ತೆರೆದಿಟ್ಟು ಎಚ್ಚರವಹಿಸಿ.