ಚೀನಾ, ಡಿ 17 (Daijiworld News/PY): ಗ್ಯಾಸ್ ಸ್ಪೋಟದಿಂದ ಚೀನಾದ ಕಲ್ಲಿದ್ದಲು ಗಣಿ ಘಟಕದಲ್ಲಿ ಅವಘಡ ಸಂಭವಿಸಿ ಕನಿಷ್ಟ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾ ಮಾಧ್ಯಮವೊಂದು ವರದಿ ಮಾಡಿದೆ.
ಈ ಘಟನೆಯು ಶನಿವಾರ ಸಂಭವಿಸಿದ್ದು, ಅವಘಡದಿಂದಾಗಿ ಇನ್ನು ಇಬ್ಬರು ಗಣಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಸಿಚುವಾನ್ ಕಲ್ಲಿದ್ದಲು ಉದ್ಯಮ ಒಡೆತನದ ಶನ್ ಮೂಶು ಎಂಬ ಕಲ್ಲಿದ್ದಲು ಕೈಗಾರಿಕಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಒಟ್ಟು 346 ಗಣಿಗಾರರು ಕೆಲಸ ನಿರ್ವಹಿಸುತ್ತಿದ್ದರು.ಕಾರ್ಮಿಕರು ಗಣಿಯಲ್ಲಿ ಭೂಗತವಾಗಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಂಪರ್ಕ ಅಡಚಣೆಯಿಂದಾಗಿ ಭೂಗತವಾಗಿ ಕೆಲಸ ಮಾಡುವ ಕಾರ್ಮಿಕರನ್ನು ಪತ್ತೆ ಮಾಡುವಲ್ಲಿ ರಕ್ಷಣಾ ತಂಡ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿ ಬಂತು ಎಂದು ತಿಳಿದುಬಂದಿದೆ.