ಸ್ಟಾಕ್ ಹೋಂ, ಡಿ 12 (DaijiworldNews/SM): ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರಿಸಿದ್ದಾರೆ. ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಅವರು ಅನಾವರಣಗೊಳಿಸಿದ್ದಾರೆ.
ಬಂಗಾಳ ಶೈಲಿಯಲ್ಲಿ ದೋತಿ, ಕೋಟು ಧರಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅಭಿಜಿತ್ ಪಾತ್ರರಾಗಿದ್ದಾರೆ. ಅವರ ಪತ್ನಿ ಎಸ್ತರ್ ಡುಫ್ಲೋ ಕೂಡ ಈ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯಾದ ನೀಲಿ ಹಸಿರು ಸೀರೆ ಉಟ್ಟು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಈ ಜೋಡಿ ಎತ್ತಿ ಹಿಡಿದಿದೆ.
ಅಭಿಜಿತ್ ಜೊತೆಗೆ ಅವರ ಪತ್ನಿ ಕೂಡಾ ನೊಬೆಲ್ ಪುರಸ್ಕಾರ ಪಡೆದುಕೊಂಡಿದ್ದಾರೆ ಇವರಿಬ್ಬರು ಈ ವರ್ಷ ಆರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಾಧ್ಯಾಪಕ ಮೈಕೆಲ್ ಕ್ರೆಮರ್ ಜೊತೆ ಹಂಚಿಕೊಂಡಿದ್ದಾರೆ.
ಈ ಮೂವರಿಗೂ ಇಂದು ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಭಾರತೀಯ ಸಂಪ್ರದಾಯದ ಉಡುಗೆಯಲ್ಲಿ ಕಾಣಿಸಿಕೊಂಡು ಎಲ್ಲರನ್ನೂಆಕರ್ಷಿಸಿದರು. ಅಭಿಜಿತ್ ಬಿಳಿ ಪಂಚೆ ಮತ್ತು ಕಪ್ಪು ಕೋಟಿನಲ್ಲಿ ಕಾಣಿಸಿಕೊಂಡರು. ಎಸ್ತರ್ ಹಸಿರು ಮತ್ತು ನೀಲಿ ಮಿಶ್ರಿತ ಬಣ್ಣದ ಸೀರೆ ಧರಿಸಿದ್ದರು ಉಳಿದಂತೆ ಪ್ರಾಧ್ಯಾಪಕ ಮೈಕೆಲ್ ಕ್ರೆಮರ್ ಸೂಟ್ ಧರಿಸಿದ್ದರು.