ಲಂಡನ್, ಡಿ 09(Daijiworld News/MSP): " ನರೇಂದ್ರ ಮೋದಿಯ ಕನಸಿನ "ಹೊಸ ಭಾರತ" ನಿರ್ಮಿಸುವಲ್ಲಿ ತಾವು ಪಾಲುದಾರರಾಗುವುದಾಗಿ" ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಶ್ವಾಸನೆ ನೀಡಿದ್ದಾರೆ. ಲಂಡನ್ ನಲ್ಲಿ ಗುರುವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತೀಯ ಸಮುದಾಯದ ಮತದಾರರನ್ನು ಸೆಳೆಯಲು ಲಂಡನ್ನ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಜಾನ್ಸನ್ ಮತ್ತು ಅವರ ಗೆಳತಿ ಕ್ಯಾರಿ ಸೈಮಂಡ್ಸ್ ಅವರೊಂದಿಗೆ ಭೇಟಿ ನೀಡಿ ಮಾತನಾಡಿದರು.
" ಭಾರತೀಯರನ್ನು ಹೊಂದಿರುವ ಲಂಡನ್ ಮತ್ತು ಯುಕೆ ಅದೃಷ್ಟಶಾಲಿ ಎಂದು ಹೇಳಿದ ಅವರು ," ಪ್ರಧಾನಿ ಮೋದಿಯವರು ಹೊಸ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ನಮ್ಮ ಯುಕೆ ಸರ್ಕಾರ ಅವರ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ಗೆಳತಿ ಸೈಮಂಡ್ಸ್ ಜೊತೆ ಕಾಣಿಸಿಕೊಂಡ ಜಾನ್ಸನ್ ಹೇಳಿದರು.
ಈ ಹಿಂದೆ "ಕನ್ಸರ್ವೇಟಿವ್ ಪಕ್ಷ " ಚುನಾವಣೆಯಲ್ಲಿ ಗೆಲ್ಲಲು ಬ್ರಿಟನ್ ನಲ್ಲಿರುವ ಭಾರತೀಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವಿಚಾರವನ್ನು ನಾನು ನರೇಂದ್ರಭಾಯ್ (ಮೋದಿ) ಗೆ ಹೇಳಿದಾಗ, ಅವರು ಕೇವಲ ನಸುನಕ್ಕು ಸುಮ್ಮನಾಗಿದ್ದರು. ನನಗೆ ಭಾರತೀಯರು ಯಾವಾಗಲೂ ಗೆಲುವಿನ ಕಡೆ ಇರುತ್ತಾರೆ ಎಂದು ತಿಳಿದಿದೆ " ಎಂದು ಜಾನ್ಸನ್ ಹೇಳಿದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತ ಸರ್ಕಾರದ ನಿರ್ಧಾರ ಖಂಡಿಸಿದ ಲೇಬರ್ ಪಾರ್ಟಿಯ ಜೆರೆಮಿ ಕಾರ್ಬಿನ್ ಅವರ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸುತ್ತಾ ಮಾತು ಮುಂದುವರಿಸಿದ ಜಾನ್ಸನ್ " ಬ್ರಿಟನ್ನಲ್ಲಿ ವರ್ಣಭೇದ ನೀತಿ ಅಥವಾ ಹಿಂದು ವಿರೋಧಿ ಮತ್ತು ಭಾರತ ವಿರೋಧಿ ಭಾವನೆಗಳ ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.
ಸ್ವಾಮಿ ನಾರಾಯಣ ಮಂದಿರ ಭೇಟಿ ನೀಡಿದ ಅವರು , "ಹಿಂದೂ ಸಮುದಾಯವು ಈ ದೇವಾಲಯವನ್ನು ನಮ್ಮ ದೇಶಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಗಳಾಲ್ಲಿ ಒಂದಾಗಿದೆ. ಬಹುದೊಡ್ಡ ಧಾರ್ಮಿಕ ಕೆಲಸದ ಮೂಲಕ ನೀವೆಲ್ಲಾರೂ ನಮ್ಮ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೀರಿ" ಎಂದು ಹೇಳಿದರು. "
ಬ್ರಿಟನ್ನಲ್ಲಿ ಸಾರ್ವಜನಿಕ ಚುನಾವಣೆಗಳು ನಡೆಯಲಿದ್ದು . ಬ್ರಿಟನ್ನಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿರುವ ಭಾರತೀಯ ಸಮುದಾಯವನ್ನು ಒಲಿಸುಕೊಳ್ಳುವಲ್ಲಿ ಬ್ರಿಟನ್ನ ರಾಜಕೀಯ ಪಕ್ಷಗಳು ಮುಂದಾಗಿವೆ.