ಅಪಘಾನಿಸ್ತಾನ, ನ 2 (Daijiworld News/MSP): ಉತ್ತರ ಅಫ್ಘಾನಿಸ್ತಾನದ ತಹ್ಖರ್ ಪ್ರಾಂತ್ಯದ ದರ್ಖಾದ್ ನಲ್ಲಿ ನಡೆದ ಬಾಂಬ್ ಸ್ಫೋಟದಿಂದ ಒಂಬತ್ತು ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಒಂಬತ್ತು ಶಾಲಾ ಮಕ್ಕಳು ಶನಿವಾರ ತಹ್ಖರ್ ಪ್ರಾಂತ್ಯದ ದರ್ಕಾಡಿಸ್ಟ್ರಿಕ್ಟ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಮಕ್ಕಳೆಲ್ಲರೂ ಶಾಲೆಗೆ ತೆರಳುತ್ತಿದ್ದರು ಎಂದು ಪಜ್ವೋಕ್ ಅಫಘಾನ್ ನ್ಯೂಸ್ ವರದಿ ಮಾಡಿದೆ.
"ಭಯೋತ್ಪಾದಕರು ತಾಹಿರಿ ಗ್ರಾಮದಲ್ಲಿ ರಸ್ತೆಯೊಂದರಲ್ಲಿ ಬಾಂಬ್ ಹುದುಗಿಸಿಟ್ಟಿದ್ದು, ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಗೆ ಈ ದಾರಿಯಲ್ಲಿ ಸಾಗುತ್ತಿರುವಾಗ ಸ್ಪೋಟವಾಗಿ ಒಂಬತ್ತು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಸ್ಥಳೀಯ ಸಮಯ ಬೆಳಿಗ್ಗೆ 09:00 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ" ಎಂದು ವರದಿ ತಿಳಿಸಿದೆ.
ದರ್ಖಾದ್ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಸೇನಾ ಪಡೆ ಹಾಗೂ ತಾಲಿಬಾನ್ ಹೋರಾಟಗಾರರ ನಡುವೆ ಹೋರಾಟ ನಡೆಯುತ್ತಿದೆ.