ವಾಷಿಂಗ್ಟನ್, ಅ.03(Daijiworld News/SS): ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ. ಭಯೋತ್ಪಾದಕ ಗುಂಪುಗಳನ್ನು ಪಾಕಿಸ್ತಾನ ನಿಯಂತ್ರಿಸದಿದ್ದರೆ, ಈ ದಾಳಿ ಇನ್ನಷ್ಟು ಹೆಚ್ಚಬಹುದು ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.
ಕಾಶ್ಮೀರ ನಿರ್ಧಾರದ ಫಲವಾಗಿ ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆ ಹೆಚ್ಚಬಹುದು. ಇದನ್ನು ಪಾಕಿಸ್ತಾನ ನಿಯಂತ್ರಿಸಬೇಕು. ಆ ರೀತಿಯ ಸಂಘರ್ಷವನ್ನು ಚೀನಾ ಬಯಸದು. ಅದಕ್ಕೆ ಬೆಂಬಲವನ್ನೂ ನೀಡುವುದಿಲ್ಲ ಎಂದು ಭಾರತ-ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರ್ಯಾಂಡಲ್ ಶ್ರೀವರ್ ವಾಷಿಂಗ್ಟನ್ನಲ್ಲಿ ಹೇಳಿದ್ದಾರೆ.
ಮಾತ್ರವಲ್ಲ, ಚೀನಾ ಮತ್ತು ಪಾಕ್ ನಡುವೆ ದೀರ್ಘ ಕಾಲದಿಂದ ಸಂಬಂಧವಿದ್ದು ಭಾರತದೊಂದಿಗೆ ಉಭಯ ದೇಶಗಳೂ ಪೈಪೋಟಿ ನಡೆಸುತ್ತಿವೆ ಎಂದು ರ್ಯಾಂಡಲ್ ಶ್ರೀವರ್ ಹೇಳಿದ್ದಾರೆ.