ಲಂಡನ್, ಅ 3 (Daijiworld News/RD): ಲಂಡನ್ ನ್ಯಾಷನಲ್ ವೆಸ್ಟ್ ಮಿನ್'ಸ್ಟರ್ ಬ್ಯಾಂಕ್ ನಲ್ಲಿರುವ ಹೈದರಾಬಾದ್ ನಿಜಾಮ್'ಗೆ ಸೇರಿದ 35 ದಶಲಕ್ಷ ಪೌಂಡ್ ಮೌಲ್ಯದಷ್ಟು ಸಂಪತ್ತು ನಮಗೆ ಸೇರಿದ್ದು ಎಂದು ಪಾಕಿಸ್ತಾನ ಹೇಳಿಕೊಂಡು ಬಂದಿತ್ತು. 70 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾನೂನು ಸಮರ ನಡೆಸಿಕೊಂಡು ಬಂದಿದ್ದು, ಅಂತಿಮವಾಗಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ರಿಟನ್ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನಿಜಾಮರ ರೂ.305 ಕೋಟಿ ಹಣ ಭಾರತಕ್ಕೆ ಸೇರಿದ್ದು ಎಂದು ಕೋರ್ಟ್ ಹೇಳಿದೆ. ಶಸ್ತ್ರಾಸ್ತ್ರ ಖರೀದಿಗೆ ಪ್ರತಿಯಾಗಿ ಸಂದಾಯವಾಗಿರುವ ಹಣ ಇದಲ್ಲ ಎಂಬುದು ಸಾಬೀತಾಗಿದ್ದು, ಇದರ ಮೇಲೆ ಭಾರತಕ್ಕೆ ಪೂರ್ಣ ಹಕ್ಕಿದೆ ಎಂದು ಕೋರ್ಟ್ ಹೇಳಿದೆ.
ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ವಿಲೀನಗೊಳ್ಳಲು ನಿರಾಕರಿಸಿದ್ದ ಹೈದರಾಬಾದ್ನ 7ನೇ ನಿಜಾಮ 35 ಲಕ್ಷ ಪೌಂಡ್ ಸಂಪತ್ತನ್ನು 1948ರಲ್ಲಿಬ್ರಿಟನ್ಗೆ ಪಾಕ್ ರಾಯಭಾರಿಯಾಗಿದ್ದ ಹಬೀಬ್ ಇಬ್ರಾಹಿಂ ರಹಿಮತ್ವುಲ್ಲಾಗೆ ವರ್ಗಾಯಿಸಿ, ಇದನ್ನು ಟ್ರಸ್ಟ್ ಹೆಸರಿನಲ್ಲಿ ಗೌಪ್ಯವಾಗಿರಿಸುವಂತೆ ಸೂಚಿಸಿದ್ದ. ಅಂದಿನಿಂದಲೂ ಈ ಸಂಪತ್ತು ಲಂಡನ್ನ ನ್ಯಾಷನಲ್ ವೆಸ್ಟ್ಮಿನ್ಸ್ಟರ್ ಬ್ಯಾಂಕ್ನಲ್ಲಿತ್ತು. ಆದರೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಕ್ಕೆ ಪ್ರತಿಯಾಗಿ ನಿಜಾಮ್ ಈ ಹಣವನ್ನು ಹಬೀಬ್ ಇಬ್ರಾಹಿಂಗೆ ರವಾನಿಸಿದ್ದ, ಇದು ತನಗೆ ಸೇರಿದ್ದು ಎಂದು ಪಾಕ್ ವಾದಿಸಿತ್ತು. ''ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಬರಲು ನಿರಾಕರಿಸಿದ ಹೈದರಾಬಾದ್ ನಿಜಾಮ ಸಂಸ್ಥಾನದ ಮೇಲೆ ಭಾರತ ಕೈಗೊಂಡ ಸೇನಾ ಕಾರ್ಯಾಚರಣೆ ಕಾನೂನುಬದ್ಧವಾಗಿಯೇ ಇತ್ತು. ಈ ಸಂಪತ್ತಿನ ಮೇಲೆ ತನ್ನ ಹಕ್ಕಿದೆ,'' ಎಂದು ಭಾರತ ವಾದಿಸಿತ್ತು.
70 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾನೂನು ಸಮರ ನಡೆಸಿಕೊಂಡು ಬಂದಿದ್ದವು. ಇನ್ನೊಂದು ಕಡೆ ಉಸ್ಮಾನ್ ಅಲಿ ಖಾನ್ ವಂಶಶ್ಥರಾದ ಮುಕ್ರಾಮ್ ಝಾ ಮತ್ತು ಮುಫಾಕಮ್ ಝಾ ಈಗ ಟರ್ಕಿಯಲ್ಲಿ ವಾಸವಾಗಿದ್ದು, ಇವರು ಕೂಡ ಇದರ ಮೇಲೆ ತಮ್ಮ ಹಕ್ಕು ಮಂಡಿಸಿದ್ದರು. ಇದೀಗ ಈ ಸಂಪತ್ತು ಭಾರತಕ್ಕೆ ಸೇರಿದ್ದು ಎಂದು ಬ್ರಿಟನ್ ಕೋರ್ಟ್ ತೀರ್ಪು ಐತಿಹಾಸಿಕ ತೀರ್ಪು ನೀಡಿದ್ದು, ಇದರಿಂದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.