ದುಬೈ, ಅ 01 (DaijiworldNews/SM): ಭಾರತೀಯ ಮೂಲದ ವ್ಯಕ್ತಿಯೋರ್ವರಿಗೆ ಒಂದು ಮಿಲಿಯನ್ (ಅಂದರೆ ಸುಮಾರು 7 ಕೋಟಿ ರೂ.) ಯುಎಸ್ ಡಾಲರ್ ಬಹುಮಾನ ಲಾಟರಿ ಹೊಡೆದಿದೆ. ದುಬೈ ಡ್ಯೂಟಿ ಫ್ರೀ (ಡಿಡಿಎಫ್) ಬಂಪರ್ ಬಹುಮಾನವೂ ದುಬೈನಲ್ಲಿ ಅಕೌಂಟೆಂಟ್ ಆಗಿರುವ ಪ್ರವೀಣ್ ಅರನ್ಹಾ ಅವರಿಗೆ ಒಲಿದುಬಂದಿದೆ.
ಅರನ್ಹಾ ಅವರು ಕಳೆದ 16 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಜಮೈರಾದ ಅಟ್ಲಾಂಟಿಸ್ ಕಂಪೆನಿಯಲ್ಲಿ ಮ್ಯಾನೇಜ್ ಮೆಂಟ್ ಅಕೌಂಟೆಂಟ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದರು.
ಒಂದು ಮಿಲಿಯನ್ ಡಾಲರ್ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, "ಇಬ್ಬರು ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಟಿಕೆಟ್ ಖರೀದಿಸಿದ್ದೆ. ಓರ್ವ ಭಾರತೀಯ ಹಾಗೂ ಮತ್ತೊಬ್ಬರು ಈಜಿಪ್ಟ್ ನವರು. ಗೆದ್ದಂತಹ ಬಹುಮಾನದ ಮೌಲ್ಯವನ್ನು ಹಂಚಿಕೊಂಡಿದ್ದೇವೆ " ಎಂದಿದ್ದಾರೆ.