ವಿಶ್ವಸಂಸ್ಥೆ, ಸೆ 28 (Daijiworld News/MSP): ಕಾಶ್ಮೀರದ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಯಾಕೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುತ್ತಿದೆ ಮತ್ತು ಚೀನಾದಾದ್ಯಂತ ಮುಸ್ಲಿಂ ಸಮುದಾಯದ ಎದುರಿಸುತ್ತಿರುವ "ಭಯಾನಕ ಪರಿಸ್ಥಿತಿಗಳ" ಬಗ್ಗೆ ಪಾಕ್ ಯಾಕೆ ಕಾಳಜಿ ತೋರಿಸುತ್ತಿಲ್ಲ ಎಂದು ಅಮೇರಿಕಾ ಪಾಕಿಸ್ತಾನವನ್ನು ಪ್ರಶ್ನಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74 ನೇ ಅಧಿವೇಶನದಲ್ಲಿ ನಡೆದ ವಿಶೇಷ ಸಮಾವೇಶದಲ್ಲಿ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾ ವಿರುದ್ಧ ಮಾತನಾಡುತ್ತಿಲ್ಲ ಯಾಕೆ ? ಎಂದು ಟೀಕಿಸಿದರು. ಒಂದು ಅಂದಾಜಿನ ಪ್ರಕಾರ ಚೀನಾ ತನ್ನ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಒಂದು ಮಿಲಿಯನ್ ಉಯಿಗರ್ ಮತ್ತು ತುರ್ಕಿಕ್ ಮಾತನಾಡುವ ಮುಸ್ಲಿಮರನ್ನು ಬಂಧಿಸಿದೆ ಎಂದು ತಿಳಿದುಬಂದಿದೆ ಎಂದು ವಿವರಿಸಿದರು.
ಎಲ್ಲಾ ಸಂದರ್ಭದಲ್ಲೂ ಚೀನಾ ಪಾಕಿಸ್ತಾನದ ಖಾಯಂ ಸ್ನೇಹ ಬೆಳೆಸಿಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕರಾದ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ವಿರುದ್ಧ ನಿರ್ಬಂಧ ಹೇರುವ ಜಾಗತಿಕ ಪ್ರಯತ್ನಗಳ ಹಿನ್ನೆಲೆಯಲ್ಲಿ ಬೀಜಿಂಗ್ , ಪಾಕ್ ನ್ನು ಅನ್ನು ಸಮರ್ಥಿಸಿಕೊಂಡಿದೆ. ಮಾತ್ರವಲ್ಲದೆ " ಆರ್ಥಿಕ ತೊಂದರೆಗಳನ್ನು ನಿವಾರಿಸಲು ಹಣದ ಕೊರತೆಯಿರುವ ಪಾಕಿಸ್ತಾನಕ್ಕೆ ಚೀನಾ ದೇಶವು ಆರ್ಥಿಕ ಸಹಾಯವನ್ನು ನೀಡುತ್ತಿದೆ.
"ಪಶ್ಚಿಮ ಚೀನಾದಲ್ಲಿ ಬಂಧನಕ್ಕೊಳಗಾಗುತ್ತಿರುವ ಮುಸ್ಲಿಮರ ಬಗ್ಗೆ, ಪಾಕಿಸ್ತಾನದ ಕಾಳಜಿಯನ್ನು ನಾನು ನೋಡಲು ಬಯಸುತ್ತೇನೆ. ಆದ್ದರಿಂದ ಚೀನಾದ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವುದು ಕಾಶ್ಮೀರದ ವಿಚಾರಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಆಲಿಸ್ ವೆಲ್ಸ್ ಹೇಳಿದ್ದಾರೆ.