ಸಿಂಗಾಪುರ, ಸೆ 27 (Daijiworld News/MSP): ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ಮೂಲದ ವ್ಯಕ್ತಿ ಸಿಂಗಾಪುರದಲ್ಲಿ ಜೈಲುಪಾಲಾಗಿದ್ದಾನೆ. ಈ ಘಟನೆ 2017ರಲ್ಲಿ ಕರಾಚಿ - ಸಿಂಗಾಪುರ ವಿಮಾನದಲ್ಲಿ ನಡೆದಿದ್ದು, ವಿಜಯನ್ ಮಾಥನ್ ಗೋಪಾಲ್ ಎಂಬಂತ ಪಾನಮತ್ತಾಗಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಆರೋಪ ಸಾಬೀತಾಗಿದ್ದು, ಸಿಂಗಾಪುರದ ನ್ಯಾಯಾಲಯ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನವೆಂಬರ್ 2, 2017ರಲ್ಲಿ ಈ ಘಟನೆ ನಡೆದಿದ್ದು, ಸಿಂಗಪುರದ ಕಾಯಂ ನಿವಾಸಿಯಾಗಿರುವ ಭಾರತೀಯ ಮೂಲದ ವಿಜಯನ್ ಮಾಥನ್ ಗೋಪಾಲ್ ಪಾನಮತ್ತನಾಗಿ 22 ವರ್ಷದ ಗಗನಸಖಿಯ ಮುಖವನ್ನು ಮುಟ್ಟಿ, ನೀನು ತುಂಬಾ ಸುಂದರವಾಗಿದ್ದೀಯ ಎಂದು ಹೇಳಿದ್ದಲ್ಲದೇ, ತನ್ನ ಕೈಗಳಿಂದ ಯುವತಿಯ ಕೆನ್ನೆಯನ್ನು ಸವರಿ ಅಸಭ್ಯವಾಗಿ ನಡೆದುಕೊಂಡಿದ್ದರು. ಆರೋಪ ಸಾಭೀತಾಗಿದ್ದು, ಅಪರಾಧಿಗೆ ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ವಿಮಾನ ಸಿಂಗಪುರದಲ್ಲಿ ಇಳಿಯುತ್ತಿದ್ದಂತೆ ಈ ಘಟನೆಗೆ ಸಂಬಂಧಿಸಿದಂತೆ ಯುವತಿ ಸ್ಕೂಟ್ ವಿಮಾನಯಾನ ಸಂಸ್ಥೆಗೆ ಮತ್ತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರಾದ ಸಲೀನಾ ಇಶಾಕ್ ಅವರು, ವಿಜಯನ್ ಅವರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.