ಜಕಾರ್ತಾ, ಸೆ.26(Daijiworld News/SS): ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಮಾಲುಕು ಪ್ರದೇಶದ ಸೆರಾಮ್ ದ್ವೀಪದಲ್ಲಿ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ.
6.5 ತೀವ್ರತೆಯ ಪ್ರಬಲ ಭೂಕಂಪದಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, 29 ಕಿ.ಮೀ. ಆಳದಲ್ಲಿ ಕಂಪನವಾಗಿದೆ. ಯಾವುದೇ ಪ್ರಾಣಾಪಾಯಗಳ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಸುನಾಮಿ ಉಂಟಾಗುವ ಸಾಧ್ಯತೆಯಿದ್ದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ವರ್ಷ 7.5ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಸೃಷ್ಟಿಯಾಗಿ ಸುಮಾರು 4,300 ಜನರು ಸಾವೀಗೀಡಾಗಿದ್ದರು. 2004ರಲ್ಲಿ ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಸುನಾಮಿಯು ಹಿಂದೂ ಮಹಾಸಾಗರದಾದ್ಯಂತ ಸುನಾಮಿಯನ್ನು ಉಂಟು ಮಾಡಿತ್ತು. ಪರಿಣಾಮ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಜನ ಇಂಡೋನೇಷ್ಯಾದಲ್ಲಿ ಮೃತಪಟ್ಟಿದ್ದರು.