ನ್ಯೂಯಾರ್ಕ್, ಸೆ.25(Daijiworld News/SS): ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಅಂತಾರಾಷ್ಟ್ರೀಯ ಮನ್ನಣೆಯೂ ದೊರಕಿದೆ.
ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದಿಂದ 'ಗ್ಲೋಬಲ್ ಗೋಲ್ಕೀಪರ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಚ್ಛ ಭಾರತದ ಯಶಸ್ಸಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಹೆಚ್ಚು ಕೈ ಜೋಡಿಸಿದ್ದಾರೆ. ಇದು ಅವರ ಕೊಡುಗೆ, ಆದ್ದರಿಂದ ಹೆಚ್ಚು ಸಂತೋಷವಾಗಿದೆ. ಅಷ್ಟೇ ಅಲ್ಲ, ಸ್ವಚ್ಛ ಭಾರತ ಅಭಿಯಾನವನ್ನು ‘ಜನರ ಚಳವಳಿ‘ಯಾಗಿ ಪರಿವರ್ತಿಸಿದ ಭಾರತೀಯರು, ನಿತ್ಯದ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರು. ಆದ್ದರಿಂದ, ಈ ಪ್ರಶಸ್ತಿಯನ್ನು ದೇಶದ ಜರಿಗೆ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು, ಗೇಟ್ಸ್ ಪ್ರತಿಷ್ಠಾನ ನೀಡಿರುವ ‘ಜಾಗತಿಕ ಗೋಲ್ಕೀಪರ್‘ ಪ್ರಶಸ್ತಿಯನ್ನು ಭಾರತದ 130 ಕೋಟಿ ಜನರಿಗೆ ಮತ್ತು ಸ್ಚಚ್ಛತೆಗಾಗಿ ನಡೆದ ರಾಷ್ಟ್ರದ ಸಾಮೂಹಿಕ ಕಾರ್ಯಗಳಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.