ಹ್ಯೂಸ್ಟನ್, ಸೆ 24 (Daijiworld News/MSP): ಅಮೇರಿಕಾದ ಇಂಧನ ರಾಜಧಾನಿ, ಹ್ಯೂಸ್ಟನ್ ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಆದರೆ ಈ ಕಾರ್ಯಕ್ರಮದಲ್ಲಿ ಮೋದಿ ಸೆನೆಟರ್ ಜಾನ್ ಕಾರ್ನನ್ ಅವರ ಪತ್ನಿ ಕ್ಷಮೆಯಾಚಿಸಿದ್ದಾರೆ.
ಹೌದು ಅಮೇರಿಕಾದ ಅತ್ಯಂತ ಪ್ರಭಾವಿ ಸೆನೆಟರ್, ಜಾನ್ ಕಾರ್ನನ್ ’ಹೌಡಿ ಮೋದಿ ’ ಸಂದರ್ಭದಲ್ಲಿ ಮೋದಿ ಜತೆಗಿದ್ದು, ಕಾರ್ಯಕ್ರಮದುದ್ದಕ್ಕೂ ಹಲವು ಜವಬ್ದಾರಿ ನಿಭಾಯಿಸಿ ಯಶಸ್ವಿಗೊಳಿಸಿದ್ದರು. ಆದರೆ ಆ ದಿನ ಅವರ ಪಾಲಿಗೆ ವಿಶೇಷ ದಿನವಾಗಿತ್ತು. ಕಾರಣ ಅವರ ಜತೆ ವೇದಿಕೆಯಲ್ಲಿಯೇ ಇದ್ದ ಅವರ ಪತ್ನಿ ಸ್ಯಾಂಡಿ ಅವರ ಹುಟ್ಟುಹಬ್ಬದ ದಿನ ಅದಾಗಿತ್ತು. ವೈಯಕ್ತಿಕ ಸಂಭ್ರಮವನ್ನು ಬದಿಗೊತ್ತಿ ಈ ಜೋಡಿಯು ಮೋದಿ ರ್ಯಾಲಿಯಲ್ಲಿ ಪಾಲ್ಗೊಂಡಿತ್ತು. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಬರುತ್ತಿದ್ದಂತೆ ಸೆನೆಟರ್ ಜಾನ್ ಕಾರ್ನಿನ್ ಅವರ ಪತ್ನಿ ಬಳಿ ವಿನಮ್ರವಾಗಿ ಕ್ಷಮೆಯಾಚಿಸಿದರು.
" ನನ್ನ ಕಾರ್ಯಕ್ರಮದಿಂದ ನಿಮ್ಮ ಜನ್ಮದಿನದ ಸಂಭ್ರಮಕ್ಕೆ ಅಡ್ಡಿಯಾಯಿತು. ಅದಕ್ಕಾಗಿ ಕ್ಷಮೆ ಇರಲಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಯು ಪೋಸ್ಟ್ ಮಾಡಿದ ವೀಡಿಯೊ ಟ್ವೀಟ್ನಲ್ಲಿ, ಮೋದಿ ಅವರು ಕಾರ್ನಿನ್ ಅವರ ಪತ್ನಿ ಸ್ಯಾಂಡಿಯನ್ನು ನೇರವಾಗಿ ಉದ್ದೇಶಿಸಿ, ಕ್ಷಮೆಯಾಚಿಸುತ್ತಾ ಮತ್ತು ಮುಂದೆ ಸಮೃದ್ಧ ಮತ್ತು ಶಾಂತಿಯುತ ಭವಿಷ್ಯವನ್ನು ಹಾರೈಸಿದ್ದಾರೆ. ಈ ವೇಳೆ 67 ವರ್ಷದ ಸೆನೆಟರ್ ಮೋದಿ ನಗುತ್ತಾ ಪಕ್ಕದಲ್ಲಿ ನಿಂತಿದ್ದರು.
"ನಾನು ಕ್ಷಮಿಸಿ ಹೇಳಲು ಬಯಸುತ್ತೇನೆ ಏಕೆಂದರೆ ಇಂದು ನಿಮ್ಮ ಜನ್ಮದಿನ ಮತ್ತು ನಿಮ್ಮ ದೊಡ್ಡ ಜೀವನ ಸಂಗಾತಿ ನನ್ನೊಂದಿಗಿದ್ದಾರೆ, ಆದ್ದರಿಂದ ನೀವು ಇಂದು ಅಸೂಯೆ ಪಟ್ಟಿರಬೇಕು" ಎಂದು ಪ್ರಧಾನಿ ಮೋದಿ ಹೇಳಿದರು.
"ನಿಮಗೆ ಶುಭ ಹಾರೈಸುತ್ತೇನೆ, ನಿಮಗೆ ಸಂತೋಷದ ಜೀವನ ಮತ್ತು ನಿಮಗಾಗಿ ಅತ್ಯಂತ ಸಮೃದ್ಧ ಶಾಂತಿಯುತ ಭವಿಷ್ಯವನ್ನು ಬಯಸುತ್ತೇನೆ. ಎಲ್ಲಾ ಶುಭಾಶಯಗಳು" ಎಂದು ಅವರು ಹೇಳಿದರು.
ದಂಪತಿಗೆ ಮದುವೆಯಾಗಿ 40 ವರ್ಷಗಳಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಟೆಕ್ಸಾಸ್ನ ಸೆನೆಟರ್ ಆಗಿರುವ ಕಾರ್ನಿನ್, "ಹೌಡಿ ಮೋದಿ!" ಎಂಬ ಮೆಗಾಕ್ಕೆ ಹಾಜರಾದ ಹಲವಾರು ಪ್ರಮುಖ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಶಾಸಕರಲ್ಲಿ ಒಬ್ಬರಾಗಿದ್ದರು.