ದುಬೈ, ಸೆ 14 (Daijiworld News/MSP): ಸೌದಿಯಲ್ಲಿರುವ ತೈಲ ಘಟಕಗಳ ಸಂಸ್ಕರಣಾ ಘಟಕದ ಮೇಲೆ ಡ್ರೋಣ್ ದಾಳಿ ನಡೆಸಲಾಗಿದೆ. ಶನಿವಾರ ಬೆಳಗ್ಗೆ ಈ ದಾಳಿ ನಡೆದಿದ್ದು, ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ತೈಲ ಘಟಕಗಳ ಸಂಸ್ಕರಣಾ ಘಟಕದ ಸ್ಥಳವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮ ಆಕಾಶದೆತ್ತರಕ್ಕೆ ಹೊಗೆ ಕಾಣಿಸಿಕೊಂಡಿದೆ. ಇನ್ನು ಬುಖ್ಯಾಖ್ ಮತ್ತು ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಇಲ್ಲಿಯವರೆಗೆ ಯಾವುದಾದರೂ ಜೀವಹಾನಿಯುಂಟಾಗಿದೆಯೇ ಎಂಬ ಬಗ್ಗೆ ಇದುವರೆಗೆ ಮಾಹಿತಿ ದೊರಕಿಲ್ಲ ಎಂದು ಎಂದು ಆಂತರಿಕ ಸಚಿವಾಲಯ ಹೇಳಿದೆ.
ತೈಲ ಘಟಕಗಳ ಸಂಸ್ಕರಣಾ ಮೇಲೆ ಈ ಹಿಂದೆಯೂ ಉಗ್ರಗಾಮಿಗಳು ದಾಳಿ ನಡೆಸಲು ಸಂಚು ರೂಪಿಸಿದ್ದರು. 2006ರಲ್ಲಿ ಆಲ್ ಖೈದಾ ಆತ್ಮಹತ್ಯಾ ದಾಳಿಕೋರ ತೈಲ ಸಂಕೀರ್ಣದ ಮೇಲೆ ದಾಳಿ ನಡೆಸಲು ನೋಡಿ ವಿಫಲನಾಗಿದ್ದ. ದಾಳಿ ಹಿನ್ನಲೆಯಲ್ಲಿ ಈ ವಾರಾಂತ್ಯ ತೈಲ ಮಾರುಕಟ್ಟೆ ರಜೆ ಇರುವುದರಿಂದ ತಕ್ಷಣಕ್ಕೆ ತೈಲ ಬೆಲೆ ಮೇಲೆ ಪರಿಣಾಮ ಬೀರಲಿಕ್ಕಿಲ್ಲ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 60 ಡಾಲರ್ ಗಿಂತ ಹೆಚ್ಚಾಗಿದೆ.