ಮುಜಫರಾಬಾದ್, ಸೆ.14(Daijiworld News/SS): ಕಾಶ್ಮೀರಗರಿಗೆ ಯಾವುದೇ ರೀತಿಯಲ್ಲೂ ನಿರಾಶೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರಿಗರ ಪರವಾಗಿ ನಿಲ್ಲುತ್ತೇನೆ. ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡುವ ವೇಳೆ ನಾನು ಕಾಶ್ಮೀರಿಗರ ಪರವಾಗಿ ಮತನಾಡುವೆ ಎಂದು ಭರವಸೆ ನೀಡಿದರು.
ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ, ಮೋದಿ ಅಮಾಯಕ ಕಾಶ್ಮೀರಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಾಶ್ಮೀರಿಗರು ಭಾರತದ ವಿರುದ್ಧ ನಿಲ್ಲಬೇಕು. ಬಿಜೆಪಿ-ಆರೆಸ್ಸೆಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಹೋರಾಟಕ್ಕೆ ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ.
ಕಾಶ್ಮೀರ ವಿಚಾರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಯುರೋಪಿಯನ್, ಬ್ರಿಟನ್ ಸಂಸತ್ತಿನಲ್ಲೂ ಈ ವಿಷಯದ ಬಗ್ಗೆ ಚರ್ಚೆಯಾಗಿದೆ. ವಿಶ್ವದೆದುರು ಕಾಶ್ಮೀರದ ರಾಯಭಾರಿಯಾಗಿ ಪಾಕ್ ಇರಲಿದೆ. ಕಾಶ್ಮೀರಿಗರಿಗೆ ನಿರಾಸೆ ಮಾಡುವುದಿಲ್ಲ. ಕಾಶ್ಮೀರಿಗರ ವಿರುದ್ಧ ಭಾರತ ನಡೆಸುತ್ತಿರುವ ಅಮಾನವೀಯ ಕೃತ್ಯಗಳನ್ನು ಜಗತ್ತಿನೆದುರು ತೆರೆದಿಡುತ್ತೇನೆ ಎಂದು ಇಮ್ರಾನ್ ಖಾನ್ ತಿಳಿಸಿದರು.