ನ್ಯೂಯಾರ್ಕ್, ಸೆ.12(Daijiworld News/SS): ನಿರಂತರ ವಿಧ್ವಂಸ್ಕಕ ಕೃತ್ಯಗಳನ್ನು ಎಸಗುತ್ತಿದ್ದ ಭಯೋತ್ಪಾದಕರನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಭಾರತ ಒತ್ತಡ ಹೇರುತ್ತಲೇ ಬಂದಿದೆ. ಈ ನಡುವೆ ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಮುಖ್ಯಸ್ಥ ನೂರ್ ವಾಲಿ ಮೆಹ್ಸುದ್ ಸೇರಿದಂತೆ 12 ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದು, ಹಿಜ್ಬುಲ್ಲಾ, ಹಮಾಸ್, ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್, ಐಸಿಸ್, ಐಸಿಸ್-ಫಿಲಿಪೈನ್ಸ್, ಐಸಿಸ್-ಪಶ್ಚಿಮ ಆಫ್ರಿಕಾ, ಮತ್ತು ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ ಸೇರಿದಂತೆ ಹಲವು ಉಗ್ರ ಸಂಘಟನೆಯ ಉಗ್ರರನ್ನು ವಿಶೇಷವಾಗಿ ಗೊತ್ತುಪಡಿಸಿ, ಆ ಬಳಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.
ಈಗಾಗಲೇ ಜಾಗತಿಕ ಉಗ್ರರ ಪಟ್ಟಿಗೆ ಸೇರಿರುವ ಹಲವು ಉಗ್ರರಿಗೆ ಹಾಗೂ ಅವರ ಬೆಂಬಲಿಗರಿಗೆ ಹಲವು ನಿರ್ಬಂಧಗಳನ್ನು ಕೂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.