ವಾಷಿಂಗ್ಟನ್, ಸೆ.08(Daijiworld News/SS): ಚಂದ್ರಯಾನ-2 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಯತ್ನಿಸಿದ ಇಸ್ರೋದ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ ಎಂದು ನಾಸಾ (ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಹೇಳಿದೆ.
ಭಾರತದ ಹೆಮ್ಮೆಯ ಚಂದ್ರಯಾನ-2 ಯೋಜನೆ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯತ್ನವನ್ನು ಅಮೆರಿಕದ (ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ನಾಸಾ ಶ್ಲಾಘಿಸಿದೆ.
ಈ ಕುರಿತು ನಾಸಾ ಟ್ವೀಟ್ ಮಾಡಿದ್ದು, 'ಬಾಹ್ಯಾಕಾಶವೆಂಬುದು ತುಂಬಾ ಕಠಿಣವಾದುದು. ಚಂದ್ರಯಾನ-2 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಇಸ್ರೋದ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಬಾಹ್ಯಾಕಾಶ ಯೋಜನೆಯಿಂದ ನಾವು ಪ್ರೇರಣೆ ಪಡೆದಿದ್ದೇವೆ. ಭವಿಷ್ಯದಲ್ಲಿ ನಿಮ್ಮ ಜತೆಗೂಡಿ ಸೌರಮಂಡಲದ ಅಧ್ಯಯನ ನಡೆಸಲು ಬಯಸುತ್ತೇವೆ' ಎಂದು ತಿಳಿಸಿದೆ.
ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ನೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭಾರತದ ಈ ಮಹತ್ವಾಕಾಂಕ್ಷಿ ಯೋಜವೆ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಆದರೂ ಚಂದ್ರಯಾನ-2 ಯೋಜನೆ ಕುರಿತಂತೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.