ಇಸ್ಲಾಮಾಬಾದ್, ಸೆ 07 (Daijiworld News/MSP): ಚಂದ್ರನ ದಕ್ಷಿಣ ದ್ರುವದ ರಹಸ್ಯವನ್ನು ಭೇದಿಸುವ ಭಾರತದ ಅಲ್ಪ ಹಿನ್ನಡೆಗೆ ಪಾಕಿಸ್ತಾನ ವ್ಯಂಗ್ಯವಾಡಿದೆ. ಇಸ್ರೋ ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ತಡೆಯುಂಟಾಗಿದ್ದೂ ಇದಕ್ಕೆ ಪಾಕಿಸ್ತಾನ ಇಂಡಿಯಾವನ್ನು ಎಂಡಿಯಾ ಎಂದು ಕರೆದು
ವ್ಯಂಗ್ಯವಾಡಿದೆ.
“ಮಾಡಲು ಸಾಧ್ಯವಾಗದ ಕೆಲಸವನ್ನು ಕೈಗೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಡಿಯರ್ ಎಂಡಿಯಾ " ಎಂದು ಪಾಕಿಸ್ತಾನದ ವಿಜ್ಙಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಂದ್ರಯಾನ -2 ಹಿನ್ನಡೆ ಕುರಿತು ಲೇವಡಿ ಮಾಡಿದ್ದಾರೆ.
ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ಚಂದ್ರಯಾನದ -2 ನ ವಿಕ್ರಮನ ಸುಗಮ ಲ್ಯಾಂಡಿಗ್ ಇಸ್ರೋ ಪ್ರಯತ್ನಿಸುತ್ತಿತ್ತು. ಚಂದ್ರನ ಅಂಗಳದ ಮೇಲೆ ಲ್ಯಾಂಡರ್'ನ್ನು ಇಳಿಸುವ ಕೊನೆಯ 15 ನಿಮಿಷ ಅತ್ಯಂತ ಕಷ್ಟದ ಘಳಿಗೆ ಎಂದು ಇಸ್ರೋ ಹಲವಾರು ಬಾರಿ ಹೇಳಿಕೊಂಡು ಬಂದಿತ್ತು. ಆದರೆ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು.
ಭಾರತದ ಈ ಪ್ರಯತ್ನ ಕ್ಕೆ ಪಾಕ್ ಚಂದ್ರನಲ್ಲಿ ಲ್ಯಾಂಡ್ ಆಗಬೇಕಿದ್ದ ಆಟಿಕೆ ಮುಂಬೈ ಮೇಲೆ ಬಿದ್ದಿದೆ, ಭಾರತದ 900 ಕೋಟಿ ವ್ಯರ್ಥವಾಗಿ ಹೋಗಿದೆ, ಭಾರತದ ಪ್ರಧಾನಿ ಮೋದಿ ರಾಜಕಾರಣಿಯಲ್ಲ, ಗಗನಯಾನಿ ಎಂದ ಸರಣಿ ಟ್ವೀಟ್ ಗಳ ಮೂಲಕ ಲೇವಡಿ ಮಾಡಿದ್ದಾರೆ.