ಮಾಸ್ಕೋ, ಸೆ.06(Daijiworld News/SS): ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಗಟ್ಟಿಗೊಳಿಸಲು ಮೋದಿ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ತನ್ನ ಸರಳತೆಯಿಂದ ಗಮನ ಸೆಳೆದಿದ್ದಾರೆ.
ಫೋಟೋಶೂಟ್' ನಲ್ಲಿ ತನಗಾಗಿ ಇರಿಸಲಾಗಿದ್ದ ವಿಶೇಷ ಸೋಫಾವನ್ನು ನಿರಾಕರಿಸಿ ಮಾಮೂಲಿ ಕುರ್ಚಿಯಲ್ಲಿ ಕುಳಿತುಕೊಂಡ ಮೋದಿಯವರ ಸರಳತನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ರಷ್ಯಾ ಪ್ರವಾಸದಲ್ಲಿ ವ್ಲಾಡಿವೋಸ್ಟಕ್'ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಧಿಕಾರಿಗಳ ಜೊತೆ ಫೋಟೋಶೂಟ್'ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಸೋಫಾದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದನ್ನು ಕಂಡ ಮೋದಿಯವರು ತನಗೆ ಈ ಸೋಫಾ ಬೇಡ, ಇತರರೊಂದಿಗೆ ಮಾಮೂಲಿ ಕುರ್ಚಿಯಲ್ಲೇ ಕುಳಿತುಕೊಳ್ಳುತ್ತೇನೆಂದು ಆ ಸೋಫಾ ತೆಗೆಸಿ ಬೇರೆ ಕುರ್ಚಿ ತರಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯ ಸರಳತನ ಭಾರಿ ಪ್ರಚಾರ ಪಡೆಯುತ್ತಿದೆ. ಮಾತ್ರವಲ್ಲ, ಪ್ರಧಾನಿ ಮೋದಿಯವರ ಈ ಸರಳತೆಯನ್ನು ಜನ ಪ್ರಶಂಸಿದ್ದಾರೆ.