ಡಿವೋಸ್ಟಾಕ್ , ಸೆ 05 (Daijiworld News/MSP): ಭಾರತಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ ನಲ್ಲಿ ನಡೆಯಲಿರುವ ಭಾರತ - ಜಪಾನ್ ವಾರ್ಷಿಕ ಸಭೆಯಲ್ಲಿ ಜಪಾನ್ ಪ್ರಧಾನಿ ಭಾಗವಹಿಸಲಿದ್ದಾರೆ.
ರಷ್ಯಾದಲ್ಲಿ ನಡೆಯುತ್ತಿರುವ ಪೌರ್ವಾತ್ಯ ಆರ್ಥಿಕ ವೇದಿಕೆ (ಈಸ್ಟರ್ನ್ ಎಕನಾಮಿಕ್ ಫೋರಂ)ನ ಎರಡು ದಿನಗಳ ಸಮಾವೇಶದಲ್ಲಿ ನಡೆದ ಉಭಯ ದೇಶಗಳ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಜಪಾನ್ ಹಾಗೂ ಭಾರದ ದೇಶಗಳ ನಡುವಣ ಬಾಂಧವ್ಯ ಹಾಗೂ ಜಪಾನ್ ಪ್ರಧಾನಿ ಭಾರತ ಭೇಟಿ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಶಿಂಜೋ ಅಬೆ ಅವರನ್ನು ವ್ಲಾಡಿವೋಸ್ಟಾಕ್ ನಲ್ಲಿ ಭೇಟಿ ಮಾಡಿರುವುದು ಖುಷಿಯ ವಿಚಾರ. ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಸಾಂಸ್ಕೃತಿಕ ಬಾಂಧವ್ಯ ಹೆಚ್ಚಳ ಸೇರಿದಂತೆ ಹಲವಾರು ವಿಚಾರಗಳ ಕುರಿತು ಮಹತ್ವದ ನಡೆಸಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಉತ್ತಮ ವಾತಾವರಣ ಸೃಷ್ಟಿಗೆ ಭಾರತ ಮತ್ತು ಜಪಾನ್ ದೇಶಗಳು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.