ಇಸ್ಲಾಮಾಬಾದ್,ಸೆ 1 (Daijiworld News/RD): ನವೀಕರಿಸಿದ ರಾಷ್ಟ್ರೀಯ ನಾಗರಿಕ(ಎನ್ಆರ್ ಸಿ)ರ ದಾಖಲೆಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದ ಕೂಡಲೇ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಧ್ಯ ಪ್ರವೇಶಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷಾಧಿಕಾರವನ್ನು ರದ್ದುಗೊಳಿಸಿದ ಬಳಿಕ ಅನಗತ್ಯ ವಿಷಯಕ್ಕೆ ಮಧ್ಯ ಪ್ರವೇಶಿಸುವ ಪಾಕ್ ಇದೀಗ ಎನ್ಆರ್ ಸಿ ವಿಚಾರದಲ್ಲೂ ಮಧ್ಯ ಪ್ರವೇಶಿಸಿ ಜಗಳಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸರಣಿ ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮೋದಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದೆ. ಮುಸ್ಲಿಂ ರಿಯಾಗಿಸುವ ನೀತಿಯ ಭಾಗವಾಗಿ ಎನ್ಆರ್ಸಿ ಜಾರಿಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ.
'ಮೋದಿ ಸರ್ಕಾರದ ಮುಸ್ಲಿಮರ ಜನಾಂಗೀಯ ಶುದ್ಧೀಕರಣದ ಕುರಿತ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿನ ವರದಿಗಳು ಕಾಶ್ಮೀರವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿವೆ. ಇದು ವಿಶ್ವದಾದ್ಯಂತ ಎಚ್ಚರಿಕೆಯ ಗಂಟೆಯಾಗಿದೆ ಎಂದು ಖಾನ್ ಟ್ವೀಟ್ ಮಾಡಿ ಎನ್ಆರ್ ಸಿ ಅಂತಿಮ ಪಟ್ಟಿ ಕುರಿತ ವರದಿಗಳನ್ನು ಅವರು ಟ್ಯಾಗ್ ಮಾಡಿದ್ದಾರೆ.