ಇಸ್ಲಾಮಾಬಾದ್,ಆ 30 (Daijiworld News/RD): ಪಾಕಿಸ್ತಾನದಲ್ಲಿ ಸಿಖ್ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಡಲಾಗಿದ್ದು ನಮಗೆ ಸಹಾಯ ಮಾಡಿ ಎಂದು ಸಂತ್ರಸ್ತೆ ಯುವತಿಯ ಪೋಷಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಮನವಿ ಮಾಡಿದ್ದಾರೆ.
ನಮ್ಮ ಮಗಳನ್ನು ಬಿಡಿಸಿಕೊಡಿ, ಇಲ್ಲವಾದಲ್ಲಿ ನಾವು ಪಂಜಾಬ್ ಗೌವರ್ನರ್ ಮನೆ ಮುಂದೆ ಕುಟುಂಬ ಸಮೇತರಾಗಿ ಸ್ವಯಂ ಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಪುತ್ರಿ ಸುರಕ್ಷಿತವಾಗಿ ಹಿಂದಿರುಗುವಂತೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಮುಖ್ಯ ನ್ಯಾಯಾಧೀಶ ಆಸೀಫ್ ಸಯೀದ್ ಅವರಿಗೆ ಮನವಿ ಮಾಡಿದ್ದಾರೆ.
ಲಾಹೋರ್ ನ ನನ್ಕಾನ ಸಾಹೀಬ್ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಗುರುದ್ವಾರ ತಂಬು ಸಾಹೀಬ್ ನ ಪಾದ್ರಿ ಭಗವಾನ್ ಸಿಂಗ್ ರ 19 ವರ್ಷದ ಜಗಜೀತ್ ಕೌರ್ ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು. ಆಕೆಯನ್ನು ಗನ್ ಪಾಯಿಂಟ್ ನಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
'ಒಂದೊಮ್ಮೆ ನೀನು ಮತಾಂತರವಾಗದಿದ್ದರೆ ನಿನ್ನ ತಂದೆಯನ್ನು ಕೊಂದು ಬಿಡುತ್ತೇವೆ ಎಂದು ಬೆದರಿಸಿ ಮತಾಂತರಿಸಿದ್ದಾರೆ'. ಎಂದು ಬಾಲಕಿಯ ಸಹೋದರ ಟ್ವೀಟ್ ಮಾಡಿದ್ದಾರೆ.