ಇಸ್ಲಾಮಾಬಾದ್, ಆ 29 (Daijiworld News/MSP): ಆರ್ಥಿಕ ದಿವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನ ತನ್ನ ಸ್ಥಿತಿಯನ್ನು ಗಮನಿಸದೆ, ಭಾರತದ ಮೇಲೆ ಅಣುಬಾಂಬ್ ಹಾಕುವ ಬೆದರಿಕೆಗೆನೂ ಕಮ್ಮಿ ಇಲ್ಲ. ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ದಾದ ಬಳಿಕ ಪಾಕಿಸ್ತಾನ ಅತ್ತ ವಿಲವಿಲ ಅಂತಾ ಒದ್ದಾಡ್ತಾ ಇದ್ದರೆ, ಇತ್ತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸಚಿವಾಲಯಕ್ಕೆ ಪವರ್ ಕಟ್ ಆಗುವ ಸ್ಥಿತಿ ಬಂದೊಂದಗಿದೆ. ಕಾರಣ ಏನು ಗೊತ್ತಾ ವಿದ್ಯುತ್ ಬಿಲ್ ಪಾವತಿ ಮಾಡದೆ ಇರೋದು!
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನ ಪ್ರಧಾನಿ ಸಚಿವಾಲಯವು ಪ್ರಸ್ತುತ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಐಇಎಸ್ಕೊ)ಗೆ ಕಳೆದ ತಿಂಗಳು 35 ಲಕ್ಷ ರೂ. ಪಾವತಿ ಮಾಡಬೇಕಿತ್ತು. ಆದರೆ ಬಾಕಿ ಪಾವತಿಸಿದ ಕಾರಣ ಈ ತಿಂಗಳ ಬಿಲ್ 41 ಲಕ್ಷ ರೂ ಏರಿದೆ.ಹಲವಾರು ನೋಟೀಸ್ ನೀಡಿದ ಬಳಿಕವೂ ಬಾಕಿ ಪಾವತಿಸಲು ಸಚಿವಾಲಯ ವಿಫಲವಾಗಿದೆ.
ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ (ಐಇಎಸ್ಕೊ) ಆಗಸ್ಟ್ 28 ರ ಬುಧವಾರ ಈ ಕುರಿತು ನೋಟಿಸ್ ನೀಡಿತ್ತು.
" ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸಚಿವಾಲಯಕ್ಕೆ ವಿದ್ಯುತ್ ಸರಬರಾಜು ಕೋಟ್ಯಂತರ ರೂಪಾಯಿಗೆ ಬಿಲ್ಗಳನ್ನು ಪಾವತಿಸದಿರುವ ಬಗ್ಗೆ ಸಂಪರ್ಕ ಕಡಿತಗೊಳಿಸುವ ಸ್ಥಿತಿ ಬಂದೊಂದಗಿದೆ. ಇದು ಸಚಿವಾಲಯದ ಪುನರಾವರ್ತಿತ ಸಮಸ್ಯೆಯಾಗಿದೆ.ಹಲವಾರು ಬಾರಿ ನೋಟೀಸ್ ನೀಡಲಾಗಿದೆ. ಬಾಕಿ ಪಾವತಿಸದಿದ್ದರೆ ನಾವು ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತೇವೆ" ಎಂದು ಐಇಎಸ್ಕೊ ಮೂಲವೊಂದು ತಿಳಿಸಿದೆ.