ವಾಷಿಂಗ್ಟನ್, ಆ.21(Daijiworld News/SS): ಮತ್ತೊಮ್ಮೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದು, ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಟ್ರಂಪ್ ಕರೆ ಮಾಡಿ ಮಾತನಾಡಿದ ಬಳಿಕ ಮತ್ತೆ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗೆ ಧರ್ಮವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿರುವ ಟ್ರಂಪ್, ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳವಾಗಿದೆ. ನೀವು ಹಿಂದು ಮತ್ತು ಮುಸ್ಲಿಂರನ್ನು ಹೊಂದಿದ್ದೀರಿ, ನೀವು ಕಾಶ್ಮೀರವನ್ನು ಒಟ್ಟಿಗೆ ತೆಗದುಕೊಂಡು ಹೋದರೆ ದೊಡ್ಡವರಾಗುತ್ತೀರ ಎಂದು ಹೇಳುವುದಿಲ್ಲ. ನಾನು ಉತ್ತಮವಾದುದ್ದನ್ನೇ ಮಾಡುತ್ತೇನೆ. ಬೇಕಾದರೆ ಮಧ್ಯಸ್ತಿಕೆ ವಹಿಸುತ್ತೇನೆ ಎಂದು ವೈಟ್ಹೌಸ್ನಲ್ಲಿ ಹೇಳಿದ್ದಾರೆ.
ನೀವು ಎರಡು ಪ್ರಾಂತ್ಯಗಳನ್ನು ಹೊಂದಿದ್ದೀರಾ, ದೀರ್ಘಕಾಲದವರೆಗೆ ಅವು ಉತ್ತಮವಾದದ್ದನ್ನು ಪಡೆದಿಲ್ಲ. ಇದೀಗ ಸ್ಫೋಟಕ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ನಾವು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ನಿಮಗೆ ತಿಳಿದಿರುವಂತೆ ಎರಡು ದೇಶಗಳ ನಡುವೆ ಸಾಕಷ್ಟು ಸಮಸ್ಯೆ ಇದೆ. ಹಾಗೆಯೇ ಇಬ್ಬರ ಜತೆ ಒಳ್ಳೆಯ ಸಂಬಂಧವೂ ಇದೆ. ಆದರೆ, ಈ ಸಮಯದಲ್ಲಿ ಅವರು ಸ್ನೇಹಿತರಂತೆ ವರ್ತನೆ ಮಾಡುತ್ತಿಲ್ಲ. ಇದು ಗೊಂದಲದ ಪರಿಸ್ಥಿತಿಯಾಗಿದ್ದು, ಧರ್ಮದೊಂದಿಗೆ ಬಹಳಷ್ಟು ಸಂಬಂಧವಿದೆ. ಧರ್ಮವೇ ಒಂದು ಸಂಕೀರ್ಣ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
ಈ ವಾರದ ಕೊನೆಯಲ್ಲಿ ಫ್ರಾನ್ಸ್ನ ಬೈರೆಟ್ಸ್ನಲ್ಲಿ ನಡೆಯುವ ಜಿ–7 ಶೃಂಗ ಸಭೆಯ ನಡುವೆ ಮೋದಿ ಅವರನ್ನು ಭೇಟಿಯಾಗುವುದಾಗಿಯೂ ಟ್ರಂಪ್ ಅವರು ತಿಳಿಸಿದ್ದಾರೆ.